

ಬಸವಕಲ್ಯಾಣ: ನಗರದ ವರ್ಷಾ ಫಂಕ್ಷನ್ ಹಾಲ್‌ನಲ್ಲಿ ಬಿಜೆಪಿ ನಗರ ಹಾಗೂ ಗ್ರಾಮೀಣ ಮಂಡಲದ ವತಿಯಿಂದ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ಮಾತನಾಡಿ, ಬಿಜೆಪಿ ವಿಶ್ವದ ಅತೀ ದೊಡ್ಡ ಪಕ್ಷವಾಗಿದ್ದು, ಸಿದ್ಧಾಂತದ ತಳಹದಿ ಹೊಂದಿದೆ. ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಕಲ್ಯಾಣ ವಿಧಾನ ಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊಸಬರನ್ನು ಸದಸ್ಯರನ್ನಾಗಿ ಮಾಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಕೋರಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವರಾವ್ ಹಸುರೆ ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲ ಪಡಿಸಲು ಪ್ರಯತ್ನಿಸಬೇಕು. ಕೇಂದ್ರ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ಮನವರಿಕೆ ಮಾಡಿ ಕೊಡುವ ಮೂಲಕ ಆಸಕ್ತ ಯುವಕರನ್ನು ಪಕ್ಷದ ಸದಸ್ಯರನ್ನಾಗಿ ಮಾಡಬೇಕು ಎಂದು ಹೇಳಿದರು.
ಪಕ್ಷದ ನಗರ ಮಂಡಲ ಪ್ರಭಾರಿ ಗೋವಿಂದರಾವ್ ಬಿರಾದಾರ, ಬಸವಕಲ್ಯಾಣದ ಸದಸ್ಯತ್ವ ಅಭಿಯಾನ ಪ್ರಭಾರಿ ದಯಾನಂದ ಮೇತ್ರೆ, ಪಕ್ಷದ ಮುಖಂಡ ವೆಂಕಟರಾವ್ ಲಾಡೆ ಮಾತನಾಡಿದರು.
ನಗರ ಅಧ್ಯಕ್ಷ ಸಿದ್ದು ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ಗ್ರಾಮೀಣ ಅಧ್ಯಕ್ಷ ಜ್ಞಾನೇಶ್ವರ ಮುಳೆ ಸ್ವಾಗತಿಸಿದರು. ಮಹಾಂತಯ್ಯ ಸ್ವಾಮಿ ನಿರೂಪಣೆ ಮಾಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷೆ ರೂಪಾತಾಯಿ ಜಾಧವ್, ವಕ್ತಾರ ಸುಧೀರ ಕಾಡಾದಿ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಅರವಿಂದ ಮುತ್ತೆ, ರಾಜ್ಯ ಕಾರ್ಯಕಾರಣಿ ಸದಸ್ಯ ದೀಪಕ ಗಾಯಕವಾಡ, ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರತಿಕಾಂತ ಕೋಹಿನೂರ, ಮುಖಂಡರಾದ ಚಂದ್ರಕಾAತ ಬಿರಾದಾರ, ಪ್ರಕಾಶ ಮೆಂಡೋಳೆ, ಅಶೋಕ ವಕಾರೆ, ಈರಣ್ಣ ಹಲಗೆ, ಶಿವಪುತ್ರ ಗೌರ, ಶಂಕರ ನಾಗದೆ, ದಿಗಬಂಬರ ಜಲ್ದೆ, ಗ್ರಾಮೀಣ ಮಂಡಳದ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಗಡವಂತಿ, ಕಮಲಕರ ಮೆಕಾಲೆ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಬೇಂದ್ರೆ, ರಾಜು ರಾಜೋಳೆ ಹಾಗೂ ಪದಾಧಿಕಾರಿ-ಪ್ರಮುಖರು ಇದ್ದರು.