

ಮಂಜೇಶ್ವರ: ಮೂಲ ಸೌಕರ್ಯ ಕಲ್ಪಿಸಲಾಗದ ಮಂಜೇಶ್ವರ ಶಾಸಕರ ಕಾರ್ಯವೈಖರಿ ಖಂಡನಿಯ ಮತ್ತು ಸಂಶಯಾತ್ಮಕ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
ಬಿಜೆಪಿ ಸದಸ್ಯತ್ವ ಅಭಿಯಾನ ಮಾಹಿತಿ ಕಾರ್ಯಾಗಾರ ಉದ್ಘಾಟನೆ ಮಾಡಿ ಹೊಸಂಗಡಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸದಸ್ಯತ್ವಅಭಿಯಾನ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಇದು ರಾಜಕೀಯದಲ್ಲಿ ದಾಖಲೆ ಸೃಷ್ಟಿಸಲಿದೆ ಎಂದು ಹೇಳಿದರು.
ರಾಜ್ಯಸರ್ಕಾರ ಕೇರಳಕ್ಕೆ ಶಾಪ, ಮಂಜೇಶ್ವರಕ್ಕೆ ಮಂಜೇಶ್ವರದ ಈಗಿನ ಶಾಸಕರೇ ಶಾಪ. ಮಿನಿ ಮಾಸ್ಟ್‌ಲೈಟ್‌ನ್ನು ತನ್ನ ಸಮುದಾಯದ ಧಾರ್ಮಿಕ ಕೇಂದ್ರಗಳ ಮುಂದೆ ಸ್ಥಾಪಿಸುವುದು ಮಾತ್ರ ಇವರ ಕಾಯಕ. ಇದಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯ ಇವರ ಅವಧಿಯಲ್ಲಿ ನಡೆದಿಲ್ಲ ಎಂದು ಆರೋಪಿಸಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಜಯಲಕ್ಷ್ಮೀ ಭಟ್, ಪುಷ್ಪಲಕ್ಷ್ಮೀ, ಯಾದವ ಬಡಾಜೆ, ಶೇಖರ ಕೋಡಿ, ಚಂದ್ರಾವತಿ ಬಾಯಾರ್, ರಾಜ್ ಕುಮಾರ್ ಮೊರತ್ತಣೆ, ಚಂದ್ರಹಾಸ ಪೂಜಾರಿ, ನಿಶಾ ಭಟ್, ಆಶಾ ಪೆಲಪಾಡಿ, ಭಾಸ್ಕರ್ ಪೊಯ್ಯೆ, ಮಂಜುನಾಥ್ ಮುಳಿಗದ್ದೆ, ತುಳಸಿ ಕುಮಾರಿ, ನಾರಾಯಣ ತುಂಗಾ, ಮಮತಾ ಪೂಜಾರಿ, ಸುಮಂಗಲ ಪೊಸೋಟ್ ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ.ಭಟ್ ವಂದಿಸಿದರು.