

ಮುನವಳ್ಳಿ: ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸವದತ್ತಿ ಮಂಡಲ ಅಧ್ಯಕ್ಷ ವಿರೂಪಾಕ್ಷ ಮಾಮನಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಗುತ್ತಿದ್ದು, ಜನರು ಉತ್ಸುಕತೆಯಿಂದ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಭವ್ಯ ಭಾರತದ ಕನಸು ನನಸು ಮಾಡಲು ಹಾಗೂ ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಬಿಜೆಪಿ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ ಎಂದರು.
ಪ್ರತಿ ಮನೆಮನೆಗೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಲಾಯಿತು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ಮಲ್ಲೇಶ್ವರ ಸುಳೇಬಾವಿ, ಪುರಸಭೆ ಸದಸ್ಯರಾದ ಶ್ರೀಕಾಂತ ಮಲಗೌಡ್ರ, ಗುರುಶಾಂತ ಚಂದರಗಿ, ರಾಜು ಕಿಲ್ಲೇದಾರ, ಬಾಬು ಭಜಂತ್ರಿ, ಬಸು ಶಿಗ್ಗಾಂವಿ, ಮಹಾಂತೇಶ ಗೋಕಾಕ, ರಮೇಶ ಗಂಗಣ್ಣವರ, ಗೋವಿಂದ ಭೋಸಲೆ, ಆನಂದ ಕಾಮಣ್ಣವರ, ಸುಭಾಸ ಗಂಗಣ್ಣವರ, ಪ್ರವೀಣ ಸಾವಂತ ಇತರರಿದ್ದರು.