

ಹುಬ್ಬಳ್ಳಿ: ಇಲ್ಲಿಯ ಅರವಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಸೆಂಟ್ರಲ್ ಕ್ಷೇತ್ರದ ಪದಾಧಿಕಾರಿಗಳ ಸಭೆಯನ್ನು ಶಾಸಕ ಮಹೇಶ ಟೆಂಗಿನಕಾಯಿ ನಡೆಸಿದರು.
ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದ್ದು ಎಲ್ಲರೂ ಉತ್ಸಾಹದಿಂದ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪಕ್ಷದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಎಂದು ಶಾಸಕರು ಹೇಳಿದರು.
ಪದಾಧಿಕಾರಿಗಳಿಗೆ ಇರುವ ಹೊಸ ಟಾಸ್ಕ್ ಏನೆಂದರೆ, ಅಕ್ಟೋಬರ್ 26, 27 ಮತ್ತು 28ರಂದು ಸೆಂಟ್ರಲ್ ಕ್ಷೇತ್ರದಲ್ಲಿ ಮೂರು ದಿನ ಬೆಳಗ್ಗೆಯಿಂದ ರಾತ್ರಿ ಎಂಟರವರೆಗೆ ಅಭಿಯಾನ ನಡೆಸಬೇಕು. 12 ವಾರ್ಡ್ ಗಳಲ್ಲಿ ತಲಾ 25 ಜನರ ನಾಲ್ಕು ತಂಡ ಮಾಡಲಾಗುವುದು. ಪದಾಧಿಕಾರಿಗಳು, ಕಾರ್ಯಕರ್ತರು ನೇಮಿಸಿದ ವಾರ್ಡ್ ಗಳಲ್ಲಿ ಉಸ್ತುವಾರಿಗಳ ನೇತೃತ್ವದಲ್ಲಿ ಪ್ರತಿಯೊಬ್ಬರನ್ನು ಭೇಟಿ ಮಾಡಿ ಸದಸ್ಯತ್ವ ಮಾಡಬೇಕಿದೆ ಎಂದು ಟೆಂಗಿನಕಾಯಿ ತಿಳಿಸಿದರು.
ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ್ ಚವಾಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಅವಳಿನಗರದಲ್ಲಿ ನಮ್ಮ ಕ್ಷೇತ್ರದಿಂದ ಹೆಚ್ಚು ಸದಸ್ಯತ್ವವನ್ನು ಎಲ್ಲರೂ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಜಿಲ್ಲಾ ಮಾಧ್ಯಮ ವಕ್ತಾರ ರವಿ ನಾಯಕ, ಮುಖಂಡರಾದ ರಾಜು ಕಾಳೆ, ಕೃಷ್ಣ ಗಂಡಗಾಳೇಕರ್, ಮೇನಕಾ ಹುರುಳಿ, ಅಕ್ಕಮ್ಮ ಹೆಗಡೆ, ಲೀಲಾವತಿ ಪಾಸ್ತೆ, ಮೇಘನಾ ಶಿಂಧೆ ಇತರರು ಉಪಸ್ಥಿತರಿದ್ದರು.