

ಮೈಸೂರು: ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ಬುಧವಾರ ನಗರದಲ್ಲಿ ಪ್ರತ್ಯೇಕವಾಗಿ ತಿರಂಗಾ ಯಾತ್ರೆ ನಡೆಯಿತು.
ವಿಜಯನಗರ 3ನೇ ಹಂತದ ಸಂಗಂ ವೃತ್ತದಿಂದ ಆರಂಭವಾದ ತಿರಂಗಾ ಯಾತ್ರೆಗೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ
ಸಿ.ಮಂಜುಳಾ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರಧಾನಮಂತ್ರಿ ಅವರ ಹರ್‌ಘರ್ ತಿರಂಗಾ ಅಭಿಯಾನದ ಭಾಗವಾಗಿ ಕೈಮಗ್ಗ ದಿನಾಚರಣೆ, ರಕ್ಷಾಬಂಧನ, ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಯನ್ನು ಸ್ವಚ್ಛಗೊಳಿಸಿ ಪುಷ್ಪ ಮಾಲೆ ಸಮರ್ಪಿಸುವುದು, ಮನೆ ಮನೆಗೆ ಧ್ವಜ ನೀಡುವ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಸಂಗಂ ವೃತ್ತದಿಂದ ಶಾರದಾದೇವಿ ನಗರ ವೃತ್ತದವರೆಗೆ 200 ಕ್ಕೂ ಹೆಚ್ಚು ಮಹಿಳೆಯರು ಸ್ಕೂಟರ್‌ನಲ್ಲಿ ಜಾಥಾ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ರೇಣುಕಾ ರಾಜು, ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.