ಮಹಾ ಸಂಪರ್ಕ ಅಭಿಯಾನ

IMG-20230713-WA0097
Published on

ಗುಂಡ್ಲುಪೇಟೆ: ತಾಲೂಕಿನ ವಿವಿಧೆಡೆ ಗುರುವಾರ ಬಿಜೆಪಿ ವತಿಯಿಂದ ಮಹಾ ಸಂಪರ್ಕ ಅಭಿಯಾನ ನಡೆಸಲಾಯಿತು.

ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ನೇತೃತ್ವದಲ್ಲಿ ತಾಲೂಕಿನ ಶಿಂಡನಪುರ, ಅಣ್ಣೂರುಕೇರಿ, ಬನ್ನಿತಾಳಪುರ, ಕೆಲಸೂರು, ಬಲಚವಾಡಿ, ತೆರಕಣಾಂಬಿ, ಬೊಮ್ಮನಹಳ್ಳಿ, ವಡ್ಡಗೆರೆ, ಬೊಮ್ಮಲಾಪುರ, ಕೊಡಸೂಗೆ, ಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪಿಯಲ್ಲಿ ಕೇಂದ್ರ ಸರ್ಕಾರದ 9 ವರ್ಷದ ಸಾಧನೆಯುಳ್ಳ ಕರಪತ್ರವನ್ನು ಮನೆ ಮನೆಗೂ ಹಂಚಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಲ್ಲಿ ಮಾಡಿರುವ ಸಾಧನೆಯನ್ನು ತಿಳಿಸಲಾಯಿತು. ಬಿಜೆಪಿ ಮುಖಂಡರಾದ ಎಸ್.ಸಿ.ಮಂಜುನಾಥ್, ಮಹದೇವಶೆಟ್ಟಿ, ಮಹದೇವಪ್ರಸಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net