ಕೊಪ್ಪಳ ಬಿಜೆಪಿ ಕಚೇರಿ ಉದ್ಘಾಟನೆ: ಪಾಸ್ ಇಲ್ಲದೇ ನಾಯಕರ ಪರದಾಟ

IMG_20221215_112003.jpg
Published on

ಪೊಲೀಸ್ - ಪ್ರಮುಖರ ಮಧ್ಯೆ ವಾಗ್ವಾದ

ಕೊಪ್ಪಳ: ಬಿಜೆಪಿ ನೂತನ ಜಿಲ್ಲಾ ಕಚೇರಿ ಉದ್ಘಟನಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ಪಕ್ಷದ ಪ್ರಮುಖರಿಗೆ ಪಾಸ್ ಇಲ್ಲದಿದ್ದರಿಂದ ಪೋಲೀಸರು ಮತ್ತು ನಾಯಕರ ಮಧ್ಯೆ ವಾಗ್ವಾದ ನಡೆದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಜಿ.ಪಂ.ಮಾಜಿ ಅಧ್ಯಕ್ಷ ಅಮರೇಶ ಕೂಳಗಿ, ವಿಶ್ವನಾಥ‌ ಮರಿಬಸ್ಸಪ್ಪ ಸೇರಿದಂತ ಮತ್ತಿತರರು ಕಚೇರಿಗೆ ಆಗಮಿಸಿದ್ದಂತೆ ಪ್ರವೇಶಧ್ವಾರದ ಬಳಿ ತಡೆದ ಪೊಲೀಸರು ಪಾಸ್ ಇಲ್ಲದವರನ್ನು ಒಳಗೆ ಬಿಡುವುದಿಲ್ಲವೆಂದರು. ನಾನು ಜಿ.ಪಂ. ಮಾಜಿ ಅಧ್ಯಕ್ಷ, ಇವರೆಲ್ಲ ಪಕ್ಷದ‌ ಪ್ರಮುಖರು ಎಂದು ಅಮರೇಶ ಕೊಳಗಿ ಹೇಳಿಕೊಂಡರು.
ಇರಬಹುದು ಸರ್. ಪಾಸ್ ಇದ್ದವರನ್ನು ಮಾತ್ರ‌ ಒಳಗೆ ಬಿಡುವಬೇಕು ಎಂಬ ನಿರ್ದೇಶನವಿದೆ ಎನ್ನುತ್ತಿದ್ದಂತೆ ಬಿಜೆಪಿ ಪ್ರಮುಖರು ಆಕ್ಷೇಪಿಸಿದರು. ಇದರಿಂದ  ಬಿಜೆಪಿ ನಾಯಕರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಜನರು ಗುಂಪು ಗೂಡಿದ್ದರಿಂದ ಕಚೇರಿ ಒಳಗಿಂದ ಆಗಮಿಸಿದ ಕೆಲ ಹಿರಿಯ ನಾಯಕರು, ಪೊಲೀಸರ ಮನವೊಲಿಸಿ ಒಳಗೆ ಕರೆದೊಯ್ದರು.
ನಾಯಕರ ವಿರುದ್ಧ ಅಸಮಾಧಾನ:
ಪಕ್ಷಕ್ಕಾಗಿ ಹಗಲಿರುಳು‌ ದುಡಿಯುವವರಿಗೆ ಪಾಸ್ ನೀಡಿಲ್ಲ. ಅಮಾವಾಸ್ಯೆ, ಹುಣ್ಣಿಮೆಗೆ ಬರುವವರಿಗೆ ಪಾಸ್ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net