ಬಿಜೆಪಿ ಕಾರ್ಯಾಲಯದಲ್ಲಿ ಮುಖಂಡರ ಸಭೆ

IMG_20251019_195808_400.jpg
Published on

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಮತ್ತು ಎಸ್ಐಆರ್ ಮತದಾರರ ಪಟ್ಟಿ ಪರಿಷ್ಕರಣೆ, ಆತ್ಮನಿರ್ಭರ ಭಾರತ ಸಂಕಲ್ಪ, ಹರ್ ಘರ್ ಸ್ವದೇಶಿ ಅಭಿಯಾನ ಅಂಗವಾಗಿ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸಭೆ ಏರ್ಪಡಿಸಲಾಗಿತ್ತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಭೆ ಉದ್ಘಾಟಿಸಿ ಮಾತನಾಡಿ, ಮೊದಲಿನ ವೋಟರ್ ಎನ್ರೋಲ್ಮೆಂಟ್ ಈಗ ಬದಲಾಗಿದೆ. ಮೊದಲು ಪ್ರತಿ ಚುನಾವಣೆಯಲ್ಲಿ ಮತದಾರರ ಹೆಸರು ನೊಂದಾಯಿಸುವುದಿರಲಿಲ್ಲ, ಈಗ ಪದವೀಧರರು ಮತ ಚಲಾಯಿಸಬೇಕೆಂದರೆ ಕಡ್ಡಾಯವಾಗಿ ಹೊಸದಾಗಿ ಹೆಸರನ್ನು ನೋಂದಾಯಿಸಲೇಬೇಕು ಎಂದರು.

ಆತ್ಮನಿರ್ಭರ ಭಾರತ ಸಾಕಾರವಾಗಬೇಕಾದರೆ ನಾವೆಲ್ಲರೂ ಭಾರತದಲ್ಲಿ ತಯಾರಿಸಿದ ವಸ್ತುಗಳನ್ನೆ ಉಪಯೋಗಿಸಬೇಕು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ವತಿಯಿಂದ ಸ್ವದೇಶಿ ಮೇಳವನ್ನು ಆಯೋಜಿಸಬೇಕು, ಜಿಎಸ್ಟಿ ಪರಿಷ್ಕರಣೆಯಿಂದ ಅನೇಕ ಬಡವರಿಗೆ ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ. ನಿತ್ಯ ಬಳಸುವ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ದವಸಧಾನ್ಯಗಳು ಝೀರೋ ತೆರಿಗೆ ವ್ಯಾಪ್ತಿಗೆ ಬಂದಿವೆ. ಜಿಎಸ್ಟಿ ಪರಿಷ್ಕರಣೆಯ ಲಾಭಗಳ ಬಗ್ಗೆ ಜನರಿಗೆ ತಿಳಿಸಬೇಕು ಎಂದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ವಸಂತ ನಾಡಜೋಶಿ, ಶಿವು ಮೆಣಸಿನಕಾಯಿ, ಬಸವರಾಜ ಗರಗ, ಸತೀಶ ಶೇಜವಾಡಕರ, ಮಹೇಂದ್ರ ಕೌತಾಳ, ರಾಮಣ್ಣ ಬಡಿಗೇರ, ವಿರೇಶ ಅಂಚಟಗೇರಿ, ಸಂಜಯ ಕಪಟಕರ, ಶಿವು ಹಿರೇಮಠ, ಕೃಷ್ಣಾ ಗಂಡಗಾಳೇಕರ, ಮಂಜುನಾಥ ಕಾಟಕರ, ಈಶ್ವರಗೌಡ ಪಾಟೀಲ್, ಮಂಜುನಾಥ ನೀರಲಕಟ್ಟಿ, ರಾಜು ಕೋರ್ಯಾಣಮಠ, ಅನುಪ ಬಿಜವಾಡ, ಪ್ರಿತಮ್ ಅರಕೇರಿ, ಸುಮಿತ್ರಾ ಗುಂಜಾಳ, ರಾಧಾಬಾಯಿ ಸಫಾರೆ, ಶಾಂತಾ ಹಿರೇಮಠ, ಶೀಲಾ ಕಾಟಕರ, ಪ್ರೀತಿ ಲದ್ವಾ, ಚಂದ್ರಕಲಾ ಕೊಟಬಾಗಿ, ಸುನೀತಾ ಮಾಳದಕರ, ನೀಲಮ್ಮ ಅರವಾಳದ, ರೂಪಾ ಶೆಟ್ಟಿ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net