ಬಿಜೆಪಿ ಮುಖಂಡನ ಶವ ರೈಲ್ವೆ ಹಳಿಯಲ್ಲಿ ಪತ್ತೆ

New Project (27)
Published on

ಕಾಸರಗೋಡು: ಹೊಸದುರ್ಗ ಅರವಂಜಾಲು ಪನೆಯಂದಟ್ಟು ನಿವಾಸಿ, ಬಿಜೆಪಿ ಮುಖಂಡ ತಂಬಾನ್(57) ಅವರ ಮೃತದೇಹ ಪಯ್ಯನ್ನೂರು ಮೇಲ್ಸೇತುವೆ ಸನಿಹ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ರೈಲು ಡಿಕ್ಕಿಯಾಗಿ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ. ಬಿಜೆಪಿ ರಾಜ್ಯ ಕೌನ್ಸಿಲ್ ಸದಸ್ಯರಾಗಿದ್ದರು. ಸ್ಥಳೀಯರು ನೀಡಿದ ಮಾಹಿತಿಯನ್ವಯ ಪಯ್ಯನ್ನೂರು ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net