ಸುಳ್ಳನ್ನೇ ಸತ್ಯವೆಂದು ನಂಬಿಸ್ತಾರೆ ಬಿಜೆಪಿ ನಾಯಕರು

nrp jeorje
ಎನ್.ಆರ್.ಪುರದ ಲಿಟ್ಲ್‌ಫ್ಲವರ್ ಚರ್ಚ್‌ಗೆ ಸಚಿವ ಕೆ.ಜೆ.ಜಾರ್ಜ್ ಭೇಟಿ ನೀಡಿ ಧರ್ಮಗುರುಗಳ ಆಶೀರ್ವಾದ ಪಡೆದರು. ಡಾ. ಕೆ.ಪಿ.ಅಂಶುಮಂತ್, ಗೇರ್‌ಬೈಲು ನಟರಾಜ್, ಪಿ.ಆರ್.ಸದಾಶಿವ, ಇಪ್ತೀಕರ್ ಆದಿಲ್, ಪ್ರಶಾಂತ್ ಶೆಟ್ಟಿ, ಇ.ಸಿ.ಜೋಯಿ, ಎಚ್.ಬಿ.ರಘುವೀರ್ ಇತರರಿದ್ದರು.
Published on

ಎನ್.ಆರ್.ಪುರ: ನೂರು ಬಾರಿ ಸುಳ್ಳನ್ನೇ ಹೇಳುತ್ತ ಬಂದರೆ ಅದೇ ಸತ್ಯ ಎಂದು ಜನರು ನಂಬುತ್ತಾರೆ. ಇದನ್ನೇ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು ಎಂದು ಇಂಧನ ಸಚಿವ ಕೆ.ಜೆ.ಕೆ.ಜೆ.ಜಾರ್ಜ್ ವ್ಯಂಗ್ಯವಾಡಿದರು.

ಬುಧವಾರ ಸಿಂಸೆ ಆಂಥೋಣಿ ಚರ್ಚ್, ಪಟ್ಟಣದ ಎಲ್.ಎಫ್.ಚರ್ಚ್, ಸಿಂಹನಗದ್ದೆ ಬಸ್ತಿಮಠ, ಸೇಂಟ್ ಆರ್ಥೋಡೆಕ್ಸ್ ಚರ್ಚ್, ಜಾಮೀಯಾ ಮಸೀದಿ, ಪ್ರವಾಸಿ ಮಂದಿರ ಸಮೀಪ ಇರುವ ಸೇಂಟ್ ಜಾರ್ಜ್ ಜಾಕೋ ಬೈಟ್ ಚರ್ಚ್‌ಗೆ ಭೇಟಿ ನೀಡಿ ಗುರುಗಳಿಂದ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು.
ಚುನಾವಣೆ ಸಮಯದಲ್ಲಿ ಯಾರೂ ಬೇಕಾದರೂ ಆಶ್ವಾಸನೆ ನೀಡಬಹುದು. ಆದರೆ ಅದನ್ನು ಈಡೇರಿಸಬೇಕು. ಕಾಂಗ್ರೆಸ್ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತ ಬಂದಿದೆ. ಕಾಂಗ್ರೆಸ್ ಧ್ವಜ ಬದಲಾಗಲಿಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ಸ್ವಾತಂತ್ರೃಕ್ಕೋಸ್ಕರ ಹೋರಾಟ ಮಾಡಿದ ಪಕ್ಷ. ಎಲ್ಲ ಜಾತಿ, ಧರ್ಮದ ಬಡವರಿಗೆ ಸಹಾಯ ಮಾಡಿದೆ. ಇಂದಿರಾ ಗಾಂಧಿ ಜಾರಿಗೆ ತಂದ 20 ಅಂಶಗಳ ಕಾರ್ಯಕ್ರಮಗಳು ಬಡವರ ಕಷ್ಟಕ್ಕೆ ಸ್ಪಂದಿಸಿವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಕಾಂಗ್ರೆಸ್ ಗೆಲ್ಲಲಿದೆ. ಚಿಕ್ಕಮಗಳೂರು ಜಿಲ್ಲೆ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರ ಕೋಟೆ. ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ. ಹಿಂದೆ ಉಡುಪಿಯಲ್ಲೂ ಕಾಂಗ್ರೆಸ್ ಗೆಲ್ಲುತ್ತಿತ್ತು. ಉಡುಪಿ ಜಿಲ್ಲೆಯನ್ನು ಬಿಜೆಪಿ ಭದ್ರ ಕೋಟೆ ಎಂದು ಹೇಳಲಾಗದು. ಬಿಜೆಪಿ ಸ್ವಂತ ಶಕ್ತಿಯಿಂದ ಸರ್ಕಾರ ರಚನೆ ಮಾಡಲಿಲ್ಲ. ಆಪರೇಷನ್ ಕಮಲ ಮಾಡಿ ಶಾಸಕರನ್ನು ಖರೀದಿ ಮಾಡಿ ಸರ್ಕಾರ ರಚಿಸಿತ್ತು ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲು ನಟರಾಜ್, ಕೆಪಿಸಿಸಿ ಸದಸ್ಯರಾದ ಪಿ.ಆರ್.ಸದಾಶಿವ, ಇಪ್ತೀಕರ್ ಆದಿಲ್, ಮುಖಂಡರಾದ ಕೆ.ಎ.ಅಬೂಬಕರ್, ಕೆ.ಎಂ.ಸುಂದರೇಶ್, ಇ.ಸಿ.ಜೋಯಿ, ಎಚ್.ಬಿ.ರಘುವೀರ್, ಎಂ.ಆರ್.ರವಿಶಂಕರ್, ಪ್ರಶಾಂತ ಶೆಟ್ಟಿ, ದೇವಂತ ಗೌಡ, ಜುಬೇದಾ, ಎಚ್.ಎಂ.ಮನು, ಸಾಜು, ಎಲ್ದೋ, ಎಲಿಯಾಸ್, ಶೇವಿಯಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net