ಬಿಜೆಪಿ ಮುಖಂಡರು ಬೆಪ್ಪುಗಳು

Bn
Published on

ಚಿತ್ರದುರ್ಗ: ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಅವಮಾನಿಸಿದ ಬಿಜೆಪಿಯವರೇ ಜೋಡೋ ನಂತರ ಬೆಪ್ಪಾಗಿದ್ದಾರೆ. ವಿಧಾನಸಭಾ ಚುನಾವಣೆ ವೇಳೆ ಅವರು ಬಂದ ಕಡೆಯಲೆಲ್ಲ ಕಾಂಗ್ರೆಸ್ ಗೆದ್ದಿದ್ದು, ಪ್ರಧಾನಿ ಹೋದ ಕಡೆಗಳಲ್ಲಿ ಸೋಲುಂಟಾಗಿದೆ ಎಂದು ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

ಕಾಂಗ್ರೆಸ್ ಜಿಲ್ಲಾ ಕಚೇರಿ ಮುಂಭಾಗ ಶನಿವಾರ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ,

ಗ್ಯಾರಂಟಿ ಯೋಜನೆಗಳ ಕುರಿತು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಡವರ ಜೇಬು ತುಂಬಿಸುವ ಕಾರ್ಯ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ರೈತರ 70 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಯಿತು. ಆದರೆ, ಬಿಜೆಪಿ 1 ರೂಪಾಯಿ ಕೂಡ ಮನ್ನಾ ಮಾಡಿಲ್ಲ ಎಂದು ಕಿಡಿಕಾರಿದರು.

ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಮಾತನಾಡಿ, ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಭಾರತ್ ಜೋಡೋ ಕಾರಣವಾಯಿತು. ಆ ವೇಳೆ ಬಿಜೆಪಿಯಲ್ಲಿದ್ದರೂ ಹೃದಯ ಕಾಂಗ್ರೆಸ್‌ನಲ್ಲಿತ್ತು. ಹೀಗಾಗಿ ಪಾಲ್ಗೊಳ್ಳುವಂತೆ ಜನರನ್ನು ಸಂಘಟಿಸುವ ಕೆಲಸ ಮಾಡಿದೆ. ದೇಶದೊಳಗಿನ ಪಾದಯಾತ್ರೆಗಳು ಇತಿಹಾಸವನ್ನೇ ಸೃಷ್ಟಿಸಿವೆ ಎಂದರು.

ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಇಂಡಿಯಾವನ್ನು ಭಾರತವೆಂದು ಬದಲಿಸಲು ಕೇಂದ್ರ ಮುಂದಾಗಿದೆ. ಆದರೆ, ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಟ್, ಭಾರತ್ ಸಂಚಾರ ನಿಗಮ, ಭಾರತೀಯ ರೈಲ್ವೆ ಹೀಗೆ ಅನೇಕ ಸಂಸ್ಥೆಗಳಿಗೆ ಭಾರತ್ ಹೆಸರಿಟ್ಟಿದ್ದು ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ. ಡಿಜಿಟಲ್, ಯಂಗ್, ಕೇಲ್ ಇಂಡಿಯಾ ಅಂತ ಶುರು ಮಾಡಿದ್ದೆ ಪ್ರಧಾನಿಯವರು. ಇವುಗಳಿಗೇಕೆ ಭಾರತವೆಂದು ಹೆಸರಿಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net