

ಕೊಲ್ಹಾರ: ನಮ್ಮ ಹಿರಿಯರು ಹಿಂದಿನಿಂದಲೂ ಭಜನಾ ಪರಂಪರೆ ಉಳಿಸಿ ಬೆಳೆಸಿಕೊಂಡು ಬಂದಿದ್ದು, ಅವರ ಕಲೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕಾರ್ಯ ಮಾಡಬೇಕಾಗಿದೆ ಎಂದು ಬಿಜೆಪಿ ಮುಖಂಡ ಉಮೇಶ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ದ್ಯಾಮವ್ವ ದೇವಿ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಜಾನಪದ ಪರಿಷತ್ ಸಂಯುಕ್ತಾಶ್ರಯದಲ್ಲಿ ನಡೆದ ಭಜನಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಶಿವಯೋಗಿ ಸ್ವಾಮೀಜಿ ಮಾತನಾಡಿ, ಆಧ್ಯಾತ್ಮಿಕ ವಿಚಾರಗಳ ಜೊತೆಯಲ್ಲಿ ವಿವಿಧ ರೀತಿಯ ಭಜನಾ ಕಾರ್ಯಕ್ರಮಗಳನ್ನು ನಡೆಸಿ ಜನರಲ್ಲಿ ಸಹಬಾಳ್ವೆಯ ಗುಣಗಳನ್ನು ಬೆಳೆಸಲು ಸೂಕ್ತವಾದ ವೇದಿಕೆ ಕಲ್ಪಿಸಿರುವುದು ಪುಣ್ಯದ ಕೆಲಸವಾಗಿದೆ ಎಂದರು.
ಕೈಲಾಸನಾಥ ಸ್ವಾಮೀಜಿ ಮಾತನಾಡಿ, ದಯೆ, ಕರುಣೆ, ಸಂಸ್ಕಾರದಂಥ ಗುಣಗಳನ್ನು ಹೊಂದಲು ಮಠ, ಮಂದಿರಗಳಿಗೆ ಭೇಟಿ ನೀಡಬೇಕು. ಗುರು ದರ್ಶನ ಪಡೆಯಬೇಕು. ಧಾರ್ಮಿಕ ಭಜನಾ ಕಾರ್ಯಗಳಿಂದ ಸಂಸ್ಕಾರ, ಸನ್ಮಾರ್ಗ ದೊರೆಯುತ್ತದೆ ಎಂದರು.
ಪತ್ರಕರ್ತರಾದ ಬಸವರಾಜ ಉಳ್ಳಾಗಡ್ಡಿ, ಅರುಣ ಔರಸಂಗ ಅವರನ್ನು ಸನ್ಮಾನ ಮಾಡಲಾಯಿತು. ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್.ಎಂ.ಡಾಂಗೆ, ವೈ.ಜಿ.ಶಿರೋಳ, ಸಿ.ಎಚ್.ಗೌಡರ, ಎಸ್.ಎಂ.ಕೋರಿ, ಎಸ್.ಪಿ. ಹತ್ತಿರಕಾಳ, ಸಿ.ಸಿ.ಸೌದಿ, ಎಸ್.ಎಸ್. ಬಿರಾದಾರ, ಎನ್.ಬಿ.ಬಿರಾದಾರ, ಎಸ್.ಆರ್.ಬಡಿಗೇರ, ರಾಜಪ್ಪ ಇಂಡಿ ಅವರನ್ನು ಗೌರವಿಸಲಾಯಿತು.
ಬಸವಶಿವಯೋಗಿ ಸ್ವಾಮಿಗಳು, ಕಲ್ಲಿನಾಥ ದೇವರು, ಚಂದ್ರಶೇಖರ ಹಿರೇಮಠ, ಮಲ್ಲಿಕಾರ್ಜುನ ಸ್ವಾಮಿಗಳು, ಕೈಲಾಸನಾಥ ಸ್ವಾಮಿಗಳು, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಶಂಕ್ರೆಪ್ಪ ದೇಸಾಯಿ, ಸಿ.ಎಂ.ಗಣಕುಮಾರ, ವಿನೀತ ದೇಸಾಯಿ, ಶಶಿಧರ ದೇಸಾಯಿ ರಾಜಶೇಖರ ಶೀಲವಂತ, ಕೆ.ಎಸ್.ಸೊನ್ನದ, ವಿರುಪಾಕ್ಷ ಕೋಲಕಾರ, ಬಾಬು ಭಜಂತ್ರಿ, ಶ್ರೀಶೈಲ ಅಥಣಿ, ಅಪ್ಪಾಸಿ ಮಟ್ಟಿಹಾಳ, ಮಲ್ಲಪ್ಪ ಗಣಿ, ಬಸಪ್ಪ ಕೊಠಾರಿ, ಶರಣಪ್ಪ ಕೌಲಗಿ, ಹಣಮಂತ ಪತಂಗಿ, ದ್ಯಾವಪ್ಪ ತುಂಬರಮಟ್ಟಿ ಇತರರಿದ್ದರು.