ನೌಕಾಪಡೆ ಲೆಫ್ಟಿನೆಂಟ್ ಆಗಿ ಸಾಗರ್ ಆಯ್ಕೆ: ಏಕೈಕ ಪುತ್ರನನ್ನು ಭಾರತೀಯ ಸೇನೆಗೆ ಕಳುಹಿಸಿದ ಬಿಜೆಪಿ ಮುಖಂಡ

Sagar Mandya
Published on

ಮಂಡ್ಯ: ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಹೋಬಳಿಯ ಬೂಕಹಳ್ಳಿ ಗ್ರಾಮದ ಉದ್ಯಮಿ ಹಾಗೂ ತಾಲೂಕು ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಬಿ.ಸಿ.ಮಂಜು ಅವರ ಪುತ್ರ ಬಿ.ಎಂ.ಸಾಗರ್ ಭಾರತೀಯ ಸೇನೆ ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಗೆ ಪ್ರಪ್ರಥಮ ಲೆಫ್ಟಿನೆಂಟ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿ.ಎಂ.ಸಾಗರ್ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮೈಸೂರಿನ ಸೇಂಟ್ ಜೋಸೆಫ್ ಶಾಲೆ, ಪದವಿ ಪೂರ್ವ ಶಿಕ್ಷಣವನ್ನು ಮಹೇಶ್ ಪಿ.ಯು ಕಾಲೇಜಿನಲ್ಲಿ ಹಾಗೂ ಇಂಜಿನಿಯರಿಂಗ್ ಶಿಕ್ಷಣವನ್ನು(ಸಿವಿಲ್) ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪೂರೈಸಿದ್ದಾರೆ.

ಬಿಜೆಪಿ ಮುಖಂಡ ಬೂಕಹಳ್ಳಿ ಮಂಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net