ಹನಿಟ್ರ್ಯಾಪಲ್ಲಿ ಬಿಜೆಪಿ ಮುಖಂಡ; ಸ್ವಪಕ್ಷೀಯರಿಂದಲೇ ಬ್ಲ್ಯಾಕ್​ಮೇಲ್, ಚಿಪ್ ಇಟ್ಕೊಂಡು 1 ಕೋಟಿ ರೂ. ಕೇಳಿದ್ರು!

Untitled-2
Published on

ಮೈಸೂರು: ಅಲ್ಲಲ್ಲಿ ಆಗಾಗ ಕೇಳಿಬರುತ್ತಲೇ ಇರುವ ಹನಿಟ್ರ್ಯಾಪ್ ಪ್ರಕರಣಗಳ ಪಟ್ಟಿಗೆ ಈಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ. ಮೈಸೂರು ಜಿಲ್ಲೆಯಲ್ಲಿ ವರದಿಯಾಗಿರುವ ಈ ಹನಿಟ್ರ್ಯಾಪ್ ಪ್ರಕರಣದಲ್ಲಿ ಬಿಜೆಪಿ ಮುಖಂಡರೊಬ್ಬರು ಸಿಲುಕಿದ್ದು, ಅವರನ್ನು ಅವರದೇ ಪಕ್ಷದವರು ಬ್ಲ್ಯಾಕ್​ಮೇಲ್ ಮಾಡಿರುವುದು ಬಹಳ ತಡವಾಗಿ ಬಹಿರಂಗಗೊಂಡಿದೆ.

ಪಿರಿಯಾಪಟ್ಟಣದಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ. ಪ್ರಕಾಶ್ ಬಾಬುರಾವ್ ಹನಿಟ್ರ್ಯಾಪ್​ಗೆ ಒಳಗಾದವರು. ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷರಾಗಿದ್ದ ಪ್ರಕಾಶ್ ಬಾಬುರಾವ್ ಅವರಿಗೆ ಸ್ವಪಕ್ಷೀಯರೇ ಸಂಕಷ್ಟ ತಂದಿಟ್ಟಿದ್ದಾರೆ. ಎಂಎಲ್​ಸಿ ಅಡಗೂರು ಎಚ್. ವಿಶ್ವನಾಥ್ ಅವರ ಆಪ್ತ ಹಾಗೂ ಬಿಜೆಪಿ ಮುಖಂಡ ನೇರಳಕುಪ್ಪೆ ನವೀನ್ ಮತ್ತು ಸಂಗಡಿಗರು ಬ್ಲ್ಯಾಕ್​ಮೇಲ್ ಮಾಡಿ ಸಿಕ್ಕಿಹಾಕಿಕೊಂಡಿದ್ದಾರೆ. ಆರೋಪಿಗಳಾದ ನೇರಳಕುಪ್ಪೆ ನವೀನ್, ಶಿವರಾಜ್ ಅಲಿಯಾಸ್ ಸ್ನೇಕ್ ಶಿವರಾಜ್, ಹರೀಶ್ ಅವರನ್ನು ಬಂಧಿಸಿರುವ ಪೊಲೀಸರು ಅನಿತಾ, ವಿಜಿ ಹಾಗೂ ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

                         ನೇರಳಕುಪ್ಪೆ ನವೀನ್​

ವೈದ್ಯರ ಮೊಬೈಲ್​ಫೋನ್​ನಲ್ಲಿದ್ದ ಮೆಮೊರಿ ಚಿಪ್​ ಕಳವು ಮಾಡಿದ್ದ ಆರೋಪಿಗಳು ಜನವರಿಯಿಂದ ಅಕ್ಟೋಬರ್​ ವರೆಗೆ 31.30 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ. ಆಸ್ತಿ ಮಾರಾಟ ಮಾಡಿ 27 ಲಕ್ಷ ರೂ. ನೀಡಿದ್ದರೂ ಸುಮ್ಮನಾಗದ ಆರೋಪಿಗಳು ಒಂದು ಕೋಟಿ ರೂಪಾಯಿ ನೀಡುವಂತೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು. ಇದರಿಂದ ರೋಸಿಹೋದ ವೈದ್ಯ ಪ್ರಕಾಶ್, ಕೊನೆಗೆ ಆರೋಪಿಗಳ ಕಾಟ ಶುರುವಾಗಿ​ ಹೆಚ್ಚೂಕಮ್ಮಿ ಒಂದು ವರ್ಷವಾದ ಬಳಿಕ ಮೈಸೂರಿನ ಕುವೆಂಪುನಗರ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net