ಲಾರಿ ಹಿಂಬದಿ ಚಲಿಸಿ ಬಿಜೆಪಿ ಮುಖಂಡ ಸಾವು

Published on

ಸಿದ್ದಾಪುರ: ಹಿಮ್ಮುಖವಾಗಿ ಚಲಿಸುತ್ತಿದ್ದ ಲಾರಿ ಹರಿದ ಪರಿಣಾಮ ಬಿಜೆಪಿ ಮುಖಂಡರೊಬ್ಬರು ಮೃತಪಟ್ಟಿದ್ದಾರೆ.

ಪಟ್ಟಣದ ನಿವಾಸಿ, ಬಿಜೆಪಿ ಮುಖಂಡ ಮುಕೊಂಡ ಬೋಸ್ ದೇವಯ್ಯ ಮೃತಪಟ್ಟವರು. ಇವರು ಶನಿವಾರ ಮನೆ ಬಳಿ ನಿಂತಿದ್ದ ವೇಳೆ ಇಟ್ಟಿಗೆ ಅನ್‌ಲೋಡ್ ಮಾಡಲು ಬಂದಿದ್ದ ಲಾರಿ ಹಿಮ್ಮುಖವಾಗಿ ಬಂದಾಗ ಚಕ್ರಗಳು ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಮ್ಮತ್ತಿ ಕೊಡವ ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾಗಿದ್ದ ಬೋಸ್ ಅವರು ಗೋಣಿಕೊಪ್ಪ ಎಪಿಎಂಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಅಲ್ಲದೆ ಅಖಿಲ ಕೊಡವ ಸಮಾಜದ ನಿರ್ದೇಶಕರಾಗಿದ್ದರು. ಈ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net