ಕಾಂಗ್ರೆಸ್‌ಗೆ ಬೋರ್ಡ್ ಹಾಕಿಕೊಂಡು ಮತ ಕೇಳುವ ದಯನೀಯ ಸ್ಥಿತಿ: ಕೇಂದ್ರದ ಮಾಜಿ ಸಚಿವ ಸದಾನಂದಗೌಡ ಲೇವಡಿ

D V Sadananda gowda
Published on

ಬೆಂಗಳೂರು: ಗ್ಯಾರಂಟಿ ಕಾರ್ಡ್‌ಗಳ ಬೋರ್ಡ್ ಹಾಕಿಕೊಂಡು ವೋಟು ಕೇಳುವ ದಯನೀಯ ಸ್ಥಿತಿಗೆ ಕಾಂಗ್ರೆಸ್ ಪಕ್ಷ ತಲುಪಿದೆ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದನಾಂದಗೌಡ ಲೇವಡಿ ಮಾಡಿದರು.

ಬೆಂಗಳೂರಿನ ಸಹಕಾರನಗರದ ಆಟದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಯುವ ಮೋರ್ಚಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಸಾಧುವಲ್ಲದ ಭರವಸೆಗಳನ್ನು ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ನೀಡುತ್ತಿದೆ ಎಂದು ಟೀಕಿಸಿದರು.

ಈ ಗ್ಯಾರಂಟಿಗಳ ಕಾರ್ಡ್‌ನ್ನು ಮನೆಗಳಿಗೆ ಹಂಚಲು ಮುಂದಾಗಿದೆ. ಈ ಬೋರ್ಡ್ ಜತೆಗೆ ಸೋಲುವುದೂ ಗ್ಯಾರಂಟಿ ಎಂಬ ಬೋರ್ಡ್ ಹಾಕಲು ಕಾಂಗ್ರೆಸ್‌ನವರು ಮರೆತಿದ್ದೂ, ಅದನ್ನೂ ಹಾಕಬೇಕು ಎಂದು ಡಿ.ವಿ.ಸದಾನಂದಗೌಡ ಕಾಲೆಳೆದರು.

ವಿಶ್ವಾಸ

ಬಿಜೆಪಿ ಕೇಂದ್ರೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ, ಬ್ಯಾಟರಾಯನಪುರ ಸೇರಿ 150 ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ಸಾಧನೆಗಳು, ಕೇಂದ್ರ ಸರ್ಕಾರ ನೀಡಿದ ಯೋಜನೆಗಳು, ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತಿದ್ದೇವೆ. ವಿಜಯಸಂಕಲ್ಪ ಯಾತ್ರೆಗಳಿಗೆ ಉತ್ತಮ ಸ್ಪಂದನೆ ಲಭಿಸುತ್ತಿದ್ದು, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದು ಪಕ್ಷದ ರಾಜ್ಯಾಧ್ಯಕ್ಷ ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net