ವಿಧಾನಪರಿಷತ್ ಅವಿಭಜಿತ ದಕ ಉಪಚುನಾವಣೆ; ಬಿಜೆಪಿ ಜಯಭೇರಿ

IMG-20241024-WA0030
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು

ವಿಧಾನಪರಿಷತ್‌ಗೆ ಅವಿಭಜಿತ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆದ ಉಪಚುನಾಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಜಯಭೇರಿ ಗಳಿಸಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸಿದ ಕಿಶೋರ್ ಕುಮಾರ್ ( ಬಿಜೆಪಿ)- 3654, ರಾಜು ಪೂಜಾರಿ ( ಕಾಂಗ್ರೆಸ್)- 1957, ಅನ್ವರ್ ಸಾದತ್ ( ಎಸ್ ಡಿಪಿಐ)-195 ಮತ್ತು ದಿನಕರ ಉಳ್ಳಾಲ್ (ಪಕ್ಷೇತರ)-9 ಮತಗಳನ್ನು ಪಡೆದಿದ್ದಾರೆ. ಅಸಿಂಧು-87, ಒಟ್ಟು-5902 ಮತಗಳು ಚಲಾವಣೆಯಾಗಿವೆ.

ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ನಗರದ ಪಿವಿಎಸ್ ವೃತ್ತದ ಸಮೀಪದ ಪಕ್ಷದ ಜಿಲ್ಲಾ ಕಚೇರಿ ಆವರಣದಲ್ಲಿ ಪಕ್ಷದ ಅಭಿಮಾನಿಗಳಿಗೆ ಸಂಭ್ರಮಾಚರಣೆಗೆ ಮುಂಚಿತವಾಗಿಯೇ ಏರ್ಪಾಡು ಮಾಡಿದೆ.

ನಗರದ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ಮತ ಎಣಿಕೆ ವ್ಯವಸ್ಥಿತವಾಗಿ ನಡೆದಿದ್ದು, ಯಾವುದೇ ಗೊಂದಲಗಳಿಲ್ಲದೆ, ಮಧ್ಯಾಹ್ನ ಮೊದಲೇ ಫಲಿತಾಂಶ ಪ್ರಕಟವಾಯಿತು.

ಕೇಂದ್ರ ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net