

ಕೊಪ್ಪಳ: ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿಗೆ ಅಂತ್ಯಕಾಲ ಸಮೀಪಿಸಿದೆ. ಹೀಗಾಗಿ ಮೈತ್ರಿ ಮಾಡಿಕೊಂಡಿದ್ದಾರೆ. ಜನರು ಚುನಾವಣೆಯಲ್ಲಿ ಮೈತ್ರಿಗೆ ತಕ್ಕ ಉತ್ತರ ನೀಡಲಿದ್ದಾರೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದರು.
ಕುಮಾರಸ್ವಾಮಿ ಬಿಜೆಪಿ ಕೋಮುವಾದಿ ಪಕ್ಷ ಎಂದು ಜರಿಯುತ್ತಿದ್ದರು. ಮೈತ್ರಿ ಮಾಡಿಕೊಂಡ ತಕ್ಷಣ ಜಾತ್ಯಾತೀತರಾಗುತ್ತಾರಾ. ಅವರ ಸಂಪರ್ಕದಲ್ಲಿ 40 ಕಾಂಗ್ರೆಸ್ ಶಾಸಕರಿದಿದ್ದರೆ ಅವರ‌್ಯಾಕೆ ಸಿಎಂ ಸ್ಥಾನ ಕಳೆದುಕೊಳ್ಳುತ್ತಿದ್ದರು ?
ಇದು ಬಿಜೆಪಿ, ಜೆಡಿಎಸ್‌ಗೆ ಅಂತ್ಯಕಾಲ. ಮುಂದೆ ಎಲ್ಲರೂ ಕಾಂಗ್ರೆಸ್ ಸೇರಲಿದ್ದಾರೆಂದು ಸೋಮವಾರ ಕೊಪ್ಪಳದಲ್ಲಿ ಸುದ್ದಿಗಾರನ್ನುದ್ದೇಶಿಸಿ ಹೇಳಿದರು.
ಹೆಚ್ಚುವರಿ ಡಿಸಿಎಂ ನೀಡುವ ವಿಚಾರ ಮುಗಿದ ಅಧ್ಯಾಯ. ಈ ವಿಷಯವಾಗಿ ಯಾರೋಬ್ಬರೂ ಮಾತನಾಡದಂತೆ ಹೈಕಮಾಂಡ್ ಸೂಚಿಸಿದೆ. ಶಾಸಕ ಯತೀಂದ್ರ ಅವರು ಹಿಂದೆ ಮಾತನಾಡಿದ ವಿಷಯ ಈಗ ಬಹಿರಂಗವಾಗಿದೆ.
ಚುನಾವಣೆ ಹಾಗೂ ಇದಕ್ಕೂ ಸಂಬಂಧವಿಲ್ಲ. ಬಿಜೆಪಿಯವರಿಗೆ ಮಾಡಲು ಕೆಸಲವಿಲ್ಲ. ಅದಕ್ಕೆ ಇಂಥ ವಿಷಯಗಳ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.
ಕಾವೇರಿ ನೀರು ಬಿಡುಗಡೆ ಬಗ್ಗೆ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿಗರಿಗೆ ನಾಚಿಗೆ, ಮಾನ, ಮರ್ಯಾದೆ ಇದ್ದರೆ ಪ್ರಧಾನಿಗೆ ಮಧ್ಯಸ್ಥಿಕೆ ವಹಿಸಲು ಹೇಳಲಿ. ಇಂದಿರಾ ಗಾಂಧಿ ಕಾಲದಲ್ಲಿ ಇಂಥ ಸಂದರ್ಭ ಬಂದಾಗ ಮಧ್ಯಸ್ಥಿಕೆ ವಹಸಿದ ಉದಾಹರಣೆ ಇವೆ.
ಸುಪ್ರಿಂ ಕೋರ್ಟ್ ನೀರು ಬಿಡುಗಡೆಗೆ ಆದೇಶಿಸಿದೆ. ಕಾನೂನು ಪಾಲಿಸದೆ ಸಮ್ಮನಿರಬೇಕಾ ? ಬದಲಿಗೆ ಪ್ರಧಾನಿ ಮೋದಿ ಎರಡು ರಾಜ್ಯದ ಸಿಎಂಗಳನ್ನು ಕರೆದು ಸಮಸ್ಯೆ ಪರಿಹರಿಸಲಿ ಎಂದು ಸವಾಲು ಹಾಕಿದರು.