ಸಚಿವ ತಂಗಡಗಿ ಹೇಳಿಕೆಗೆ ಬಿಜೆಪಿ ಆಕ್ರೋಶ

27-03-Shiva-5
ಪ್ರಧಾನಿ ಮೋದಿ ಬಗ್ಗೆ ಸಚಿವ ಶಿವರಾಜ ತಂಗಡಗಿ ಹೇಳಿಕೆಯನ್ನು ಖಂಡಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಶಂಕರರೆಡ್ಡಿ, ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಉಟ್ಕೂರು, ಮುಖಂಡರಾದ ವೈ.ಗೋಪಾಲರೆಡ್ಡಿ, ಸಿದ್ದನಗೌಡ ನೆಲಹಾಳ, ಕೊಟ್ರೇಶಪ್ಪ ಕೋರಿ, ಡಾ.ನಾಗರಾಜ ಬಾಲ್ಕಿ, ರಾಮಚಂದ್ರ ಕಡಗೋಲ, ಸುಲೋಚನಾ ಆಲ್ಕೂರು, ವಾಣಿಶ್ರೀ ಇದ್ದರು.
Published on

ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಕುರಿತು ಸಚಿವ ಶಿವರಾಜ ತಂಗಡಗಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಸಚಿವ ತಂಗಡಗಿ ಮೋದಿ ಎಂದು ಕೂಗುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎಂದೇಳುವ ಮೂಲಕ ಯುವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಮೋದಿಯವರ ಜನಪ್ರಿಯತೆಯನ್ನು ಕಂಡು ತಾಳದೆ ಇಂತಹ ಹೇಳಿಕೆ ನೀಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಮ್ಮ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರವಿದ್ದು, ಮೋದಿ ಬಗ್ಗೆ ಯುವ ಸಮೂಹ ಹೊಂದಿರುವ ಅಭಿಮಾನವನ್ನು ಕಂಡು ತಂಗಡಗಿ ಜನರನ್ನು ರೊಚ್ಚಿಗೆಳಿಸುವಂತಹ ಹೇಳಿಕೆ ನೀಡಿದ್ದಾರೆ. ಕೂಡಲೆ ಅವರು ಕ್ಷಮೆಯಾಚಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಶಂಕರರೆಡ್ಡಿ, ನಗರ ಘಟಕದ ಅಧ್ಯಕ್ಷ ರಾಘವೇಂದ್ರ ಉಟ್ಕೂರು, ಮುಖಂಡರಾದ ವೈ.ಗೋಪಾಲರೆಡ್ಡಿ, ಸಿದ್ದನಗೌಡ ನೆಲಹಾಳ, ಕೊಟ್ರೇಶಪ್ಪ ಕೋರಿ, ಡಾ.ನಾಗರಾಜ ಬಾಲ್ಕಿ, ರಾಮಚಂದ್ರ ಕಡಗೋಲ, ಸುಲೋಚನಾ ಆಲ್ಕೂರು, ವಾಣಿಶ್ರೀ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net