ಸುಳ್ಳು ಭರವಸೆ ನೀಡುತ್ತಿದೆ ಭಾಜಪ

5 YLB 02
ಯಲಬುರ್ಗಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಜಿಪಂ, ತಾಪಂ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶನಿವಾರ ಮಾತನಾಡಿದರು.
Published on

ಯಲಬುರ್ಗಾ: ತಳಕಲ್, ಗುನ್ನಾಳ ಸೇರಿ ಮೂರು ಕಡೆ ಜೂನ್‌ನಲ್ಲಿ ಹಾಸ್ಟೆಲ್ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಪಂ, ತಾಪಂ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಶನಿವಾರ ಮಾತನಾಡಿದರು.

ಅಧಿಕಾರಕ್ಕೆ ಬಂದ ತಕ್ಷಣ ಕಪ್ಪು ಹಣ ತರುತ್ತೇವೆ, ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಈವರೆಗೂ ಏನೂ ಮಾಡದೆ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವುದಲ್ಲಿ ನಿಸ್ಸಿಮರಾಗಿದ್ದಾರೆ. ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಬಾವುಟ ಹಾರಿಸಲು ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕಾರ್ಯಕರ್ತರು ಪಕ್ಷದ ಜೀವಾಳವಾಗಿದ್ದಾರೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಮುಂದಿನ ಚುನಾವಣೆಯಲ್ಲಿ ಜನರಿಗೆ ಕಾಂಗ್ರೆಸ್‌ನಿಂದಾದ ಅಭಿವೃದ್ಧಿ ಯೋಜನೆ ಬಗ್ಗೆ ತಿಳಿಸುವ ಕೆಲಸ ಮಾಡಬೇಕು ಎಂದರು.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಪುರ ಮಾತನಾಡಿ, ಪದಾಧಿಕಾರಿಗಳಾದವರು ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ಬಿಜೆಪಿಯವರು ಸ್ಥಳೀಯ ಸಂಸ್ಥೆಗಳಿಗೆ ಕೊಡಬೇಕಾದ ಅಧಿಕಾರ ಕೋಡಲಿಲ್ಲ. ಜನರನ್ನು ಅಧಿಕಾರದಿಂದ ವಂಚಿತ ಮಾಡಿದರು. ಆದರೆ ನಾವು ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದು ಅದರಂತೆ ಜೂನ್‌ನಲ್ಲಿ ಜಿಪಂ, ತಾಪಂ ಚುನಾವಣೆ ನಡೆಸಲಾಗುವುದು ಎಂದರು.

ತಾಲೂಕು ಪದಾಧಿಕಾರಿಗಳು:

ಆನಂದ ಉಳ್ಳಾಗಡ್ಡಿ (ಕಾರ್ಯಾಧ್ಯಕ್ಷ), ಕೆರಿಬಸಪ್ಪ ನಿಡಗುಂದಿ (ಅಧ್ಯಕ್ಷ), ರೇವಣೆಪ್ಪ ಸಂಗಟಿ (ಉಪಾಧ್ಯಕ್ಷ), ಸಂಗಣ್ಣ ಟೆಂಗಿನಕಾಯಿ(ಕಾರ್ಯದರ್ಶಿ), ಶರಣಪ್ಪ ಗಾಂಜಿ (ಕಚೇರಿ ಆಡಳಿತ ಕಾರ್ಯದರ್ಶಿ)ಆಗಿ ಅಧಿಕಾರ ಸ್ವೀಕರಿಸಿದರು.

ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೇರಿಬಸಪ್ಪ ನಿಡಗುಂದಿ, ಕುಕನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರ, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ರಡ್ಡಿ ಶ್ರೀನಿವಾಸ, ಕಾರಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಗೌಡ, ವೀರನಗೌಡ ಪಾಟೀಲ, ಯಂಕಣ್ಣ ಯರಾಸಿ, ರಾಘವೇಂದ್ರಾಚಾರ್ಯ ಜೋಶಿ, ಬಿ ಎಂ ಶಿರೂರ, ಶೇಖರಗೌಡ ಉಳ್ಳಾಗಡ್ಡಿ, ಡಾ.ದಾನರಡ್ಡಿ, ಅಶೋಕ ತೋಟದ, ಮಹೇಶ ಹಳ್ಳಿ, ಪರೀದಾಬೇಗಂ, ಡಾ.ನಂದೀತಾ ದಾನರಡ್ಡಿ, ಸಾವಿತ್ರಿ ಗೊಲ್ಲರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net