ಬಿಜೆಪಿ ಮುರುಕಲು ಮನೆ

abbayya latest
Published on

ಹುಬ್ಬಳ್ಳಿ: ಪಕ್ಷದ ನಾಯಕರಲ್ಲಿನ ಬಿಕ್ಕಟ್ಟು ಸರಿಪಡಿಸಲಾಗದೇ ಬಿಜೆಪಿ ಮುರುಕಲು ಮನೆಯಾಗಿದೆ. ಮೊದಲು ಅವರು ತಮ್ಮ ಮನೆ ಸದಸ್ಯರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ. ನಂತರ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಸೇರಿಸುವ ಬಗ್ಗೆ ಕೇಂದ್ರ ಸಚಿವರು ಹೇಳಿಕೆ ನೀಡಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕುಟುಕಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೀಡಿದ ಕಾಂಗ್ರೆಸ್​ಅನ್ನು ಕಸದ ಬುಟ್ಟಿಗೆ ಸೇರಿಸುವ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಅವರು, ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಜಯ ಸಾಧಿಸಿರಬಹುದು. ಆದರೆ, ಶೇಕಡಾವಾರು ಮತ ಗಳಿಕೆಯಲ್ಲಿ ಬಿಜೆಪಿಗೂ ಕಾಂಗ್ರೆಸ್ಸಿಗೂ ಹೆಚ್ಚು ಅಂತರವಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ದೊಡ್ಡ ಇತಿಹಾಸವಿದೆ. ಅಧಿಕಾರದ ಆಸೆಗೆ ಕಾಂಗ್ರೆಸ್ ಯಾವತ್ತು ತನ್ನ ನಿಲುವು ಕಳೆದುಕೊಂಡಿಲ್ಲ. ಬಿಜೆಪಿ ಪಕ್ಷಕ್ಕೆ ರಾಜ್ಯದಲ್ಲಿ ಯಾವುದೇ ಬಸ್ ಸ್ಟಾ್ಯಂಡು ಇಲ್ಲ, ಬಸ್ಸು ಇಲ್ಲ. ರಾಜ್ಯ ಬಿಜೆಪಿಯು ದಿಕ್ಕಾ ದಿವಾಳಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಲೂಟಿ ಹೊಡೆಯಲಾಗಿದೆ ಎಂದು ಶಾಸಕ ಯತ್ನಾಳ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವರು ಸ್ವಲ್ಪ ತಮ್ಮ ಪಕ್ಷದ ಕಡೆಗೂ ಗಮನಹರಿಸಲಿ ಪ್ರಕಟಣೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net