ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದ; ಅಧ್ಯಕ್ಷ ಸುಭಾಷ ಪಾಟೀಲ

IMG-20240115-WA0030.jpg
Published on


ಬೆಳಗಾವಿ:ಮುಂಬರುವ ಲೋಕಸಭೆ, ಜಿಪಂ, ತಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ನೂತನ ಬಿಜೆಪಿ ಗ್ರಾಮೀಣ ಜಿಲ್ಷಾಧ್ಯಕ್ಷ ಸುಭಾಷ ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ದಾಖಲೆಗಳ ಮತಗಳ ಅಂತರದಿಂದ ಗೆಲ್ಲಿಸಿ ಸಂಘಟನೆ ಸಾಬೀತುಪಡಿಸಬೇಕು. ಈಗಿನಿಂದಲೇ ಹಳ್ಳಿ ಹಳ್ಳಿಗಳಿಗೆ ಹೋಗಿ ಪಕ್ಷ ಸಂಘಟನೆ ಜತೆಗೆ ಕೇಂದ್ರ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು ಕೂಡ ಜನರಿಗೆ ತಿಳಿಸೋಣ ಎಂದರು.
 ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡ ಮಾತನಾಡಿ, ದಿ.ಸುರೇಶ ಅಂಗಡಿಯವರ ಜಿಲ್ಲಾಧ್ಯಕ್ಷರಿದ್ದಾಗ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ ಸುಭಾಷ ಪಾಟೀಲ ಇಂದು ಬೆಳಗಾವಿಯ 8ವಿಧಾನಸಭಾ ಕ್ಷೇತಗಳ 9ಮಂಡಲಗಳನ್ನು ಒಳಗೊಂಡ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ,ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ ಕೊಲಕಾರ, ಜಿಲ್ಲಾ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್ ಪಾಟೀಲ, ಸವದತ್ತಿ ಮಂಡ ಅಧ್ಯಕ್ಷ ಈರಣ್ಣ ಚಂದರಗಿ, ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಧನಂಜಯ ಜಾಧವ, ಕಾಡಪ್ಪ್ ವೀರಶೆಟ್ಟಿ, ವೀರಭದ್ರ ಪೂಜಾರ, ಸಂಜಯ ನವಲಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net