

ಬೆಳಗಾವಿ: ಬಿಜೆಪಿ ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಜಿಲ್ಲಾಧ್ಯಕ್ಷರ ಆಯ್ಕೆ ಕಗ್ಗಂಟಾಗಿದ್ದು, ಜಾರಕಿಹೊಳಿ ಸಹೋದರರ ನಡೆ ಕುತೂಹಲ ಉಂಟು ಮಾಡಿದೆ.
ರಾಜ್ಯಾದ್ಯಂತ ಬಿಜೆಪಿ ಸಂಘಟನಾತ್ಮಕ,ಭೂತ ಮಟ್ಟ, ವಿಭಾಗೀಯ ಮಟ್ಟದ ಅಧ್ಯಕ್ಷ, ಸದಸ್ಯರ ಆಯ್ಕೆ ಬೆನ್ನಲ್ಲೆ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ಆರಂಭವಾಗಿವೆ. ಬುಧವಾರ ಬೆಳಗಾವಿ, ಚಿಕ್ಕೋಡಿ ಜಿಲ್ಲಾಧ್ಯಕ್ಷರ ಆಯ್ಕೆ ನಡೆಯಲಿದೆ. ಈ ನಡುವೆ ಹಾಲಿ, ಮಾಜಿ ಶಾಸಕರ ತಮ್ಮ ಬೆಂಬಲಿಗರನ್ನು ಆಯ್ಕೆ ಮಾಡಲು ಪೈಪೋಟಿ ಏರ್ಪಟ್ಟಿದೆ. ಈ ನಡುವೆ ಜಾರಕಿಹೊಳಿ ಸಹೋದರರ ಒಲವು ಯಾರ ಕಡೆ ಎಂಬುದು ಗೌಪ್ಯವಾಗಿ ಉಳಿದುಕೊಂಡಿದೆ.
ಬಿಜೆಪಿ ಮೂಲಗಳ ಮಾಹಿತಿ ಪ್ರಕಾರ ಹಾಲಿ, ಮಾಜಿ ಶಾಸಕರು, ಸಂಸದರೊಂದಿಗೆ ಒಳ್ಳೆಯ ಸಂಬಂದ ಇಟ್ಟುಕೊಂಡಿರುವ ಹಾಗೂ ಜಾರಕಿಹೊಳಿ ಸಹೋದರರ ಆಪ್ತವಾಗಿರುವ ಹಿನ್ನೆಲೆ ಹಾಲಿ ಜಿಲ್ಲಾಧ್ಯಕ್ಷರ ಸುಭಾಷ್ ಪಾಟೀಲ ಮುಂದುವರಿಸುವುದು ಸೂಕ್ತ. ಒಂದು ಹೊಸದಾಗಿ ಅಧ್ಯಕ್ಷರ ಆಯ್ಕೆ ಮುನ್ನ ಜಾರಕಿಹೊಳಿ ಸಹೋದರರ ಒಮ್ಮತ ಪಡೆದುಕೊಳ್ಳುವುದು ಸೂಕ್ತ ಎಂಬ ಮಾಹಿತಿಯನ್ನು ವರಿಷ್ಠರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.