ಮತಾಂತರ ವಿರುದ್ಧ ಪೊಲೀಸ್ ಠಾಣೆ ಮೇಟ್ಟಿಲೇರಿದ ಬಿಜೆಪಿ

IMG-20240424-WA0006.jpg
Published on

ಬೆಳಗಾವಿ: ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಹಿಂದು ವಿವಾಹಿತೆ ಮೇಲೆ ಲೈಂಗೀಕ ದೌರ್ಜನ್ಯ ಎಸಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಿರುವವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬಿಜೆಪಿ ನಿಯೋಗ ಮನವಿ ಸಲ್ಲಿಸಿತು.
ಪೊಲೀಸ್ ಠಾಣೆಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸುವ ಪ್ರಕರಣದಲ್ಲಿ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ, ಇಲ್ಲಿಯವರೆಗೆ ಇಬ್ಬರನ್ನು ಮಾತ್ರ ಬಂಧಿಸಿದದಾರೆ. ಕೂಡಲೇ ಇನ್ನೂಳಿದ ಆರೋಪಿಗಳನ್ನು ಬಂಧಿಸಿ ಅವರೆಲ್ಲರ ಮೇಲೆ ಕಠಿಣ ಶಿಕ್ಷೆ ಆಗುವ ರೀತಿಯಲ್ಲಿ ಕೇಸ್ ದಾಖಲಿಸಬೇಕು. ಅಲ್ಲದೆ, ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡುತ್ತಿರುವವರನ್ನು ಪತ್ತೆ ಹಚ್ಚಿ ಹಿಂದು ಮಹಿಳೆಯರನ್ನು ರಕ್ಷಿಸುವಂತೆ ಮನವಿ ಮೂಲಕ ಆಗ್ರಹಿಸಿದರು.
ಈ ಪ್ರಕರಣದಲ್ಲಿ ಲವ ಜೀಹಾದ ಮತಾಂತರ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮೊಸ, ವಂಚನೆ, ಜಾತಿ ನಿಂದನೆ, ಗೂಂಡಾಗಿರಿ ಹಾಗೂ ಇನ್ನು ಅನೇಕ ತೆರನಾದ ಅಪರಾಧವನ್ನು ಎಸಗಿದ ಅಪರಾಧಿ ರಫೀಕ  ಭೇಪಾರಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕೊಮು ಸೌಹಾರ್ದತೆಗೆ ದಕ್ಕೆ ತರುವದಲ್ಲದೆ ಸಮಾಜದ ಸ್ವಸ್ಥ ಹಾಳು ಮಾಡಿದ್ದು ಕೊಮುಗಲಭೆಗಳಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ  7 ಜನರಲ್ಲಿ ಕೇವಲ ಇಬ್ಬರನ್ನು ಬಂಧಿಸಿದ್ದು ಉಳಿದವರು ಬೇಕಾ ಬಿಟ್ಟಿಯಾಗಿ ಸಾರ್ವಜನಿಕವಾಗಿ ಮಾತನಾಡುತ್ತಾ ಕಾನೂನನ್ನೆ ಪ್ರಶ್ನಿಸುವ ಮಟ್ಟದಲ್ಲಿದ್ದಾರೆ. ಇವರನ್ನು ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಕೋಶಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಸಂತೋಷ ದೇಶನೂರ, ಮಂಜುನಾಥ ಪಮ್ಮಾರ, ಬಾಳೇಶ ಚವೌನ್ನವರ   ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net