

ಬೆಳಗಾವಿ: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಕಳಂಕವಿಲ್ಲದೆ ನಡೆಸಿದ ಅಧಿಕಾರದಿಂದ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ವಕ್ತಾರ ಎಂ.ಬಿ.ಝೀರಲಿ ಭವಿಷ್ಯ ನುಡಿದರು.
ನಗರದ ಬಿಜೆಪಿ ವಿಭಾಗ ಕಛೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರು ಭ್ರಷ್ಟಾಚಾರದಲ್ಲಿ ಮುಳಗಿದ್ದು ಆ ಪಕ್ಷದ 28ನಾಯಕರಿಗೆ ಶಿಕ್ಷೆಯಾಗಿದ್ದು ಅನೇಕರು ಜೈಲಿಗೆ ಹೋಗಿ ಬಂದಿದ್ದಾರೆ ಇದನ್ನು ಮರೆತು ಬಿಜೆಪಿ ಸರ್ಕಾರದ ಮೇಲೆ ಇಲ್ಲಸಲ್ಲದ ವ್ಯರ್ಥ ಆರೋಪ ಮಾಡುತ್ತಿರುವದು ಭೂತದ ಬಾಯಲ್ಲಿ ಭಗವತ್ ಗೀತೆ ಹೇಳಿದಂತಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಜಿ ಗೃಹ ಸಚಿವ ಅಮಿತ ಷಾಜಿ ಹಾಗೂ ಅನೇಕ ರಾಷ್ಟ್ರೀಯ, ರಾಜ್ಯ ನಾಯಕರು ಚುನಾವಣಾ ಪ್ರಚಾರದ ರೋಡ್ ಶೋ, ಬಹಿರಂಗ ಸಭೆಗಳಲ್ಲಿ ಲಕ್ಷಾಂತರ ಜನ ಪಾಲ್ಗೊಳ್ಳುವ ಮೂಲಕ ಬಿಜೆಪಿಯನ್ನು ರಾಜ್ಯದ ಜನತೆ ಅರ್ಶಿವದಿಸಲಿದ್ದಾರೆ. ಜನತೆಗೆ ಬಿಜೆಪಿಯೆ ಭರವಸೆಯಾಗಿದ್ದು ಬಿಜೆಪಿಯ ಪ್ರಣಾಳಿಕೆಯ ಅಂಶಗಳು ಎಲ್ಲ ಸಮುದಾಯಗಳಿಗೆ ಮುಟ್ಟಲಿದ್ದು ಸರ್ವರ ಏಳಿಗೆಗೆ ಪೂರಕವಾಗಲಿದೆ. ಅನೇಕ ಕಾಂಗ್ರೆಸ್ ನಾಯಕರ ಬೆಂಬಲಿಗರಿಂದ ಸುಳ್ಳು ಸುದ್ದಿ ಬಿತ್ತರಿಸಿ ಬಿಜೆಪಿಯ ಬಗ್ಗೆ ಅಪಪ್ರಚಾರ ಮಾಡಿದರು ರಾಜ್ಯದ ಜನತೆ ಅದಕ್ಕೆ ಕಿವಿಕೊಡುವದಿಲ್ಲ ಎಂದರು
ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಶರದ ಪಾಟೀಲ, ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ನೀತಿನ ಚೌಗಲೆ, ಕೇದಾರ ಜೋರಾಪೂರ, ಪ್ರಜ್ವಲ್ ಅಥಣಿಮಠ ಇದ್ದರು.