ಸಿದ್ದರಾಮಯ್ಯ ಗೆ ಸ್ಪರ್ಧಿಸಲು ಕ್ಷೇತ್ರ ಸಿಗುತ್ತಿಲ್ಲ

IMG-20230331-WA0001.jpg
Published on


ಬೆಳಗಾವಿ: ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೋಲಿನ ಭಯದಿಂದಾಗಿ ಸುರಕ್ಷಿತ ಕ್ಷೇತ್ರ ಸಿಗದೆ ಕಂಗಾಲಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಇಡೀ ರಾಜ್ಯದಲ್ಲಿ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನೂ ಸಹ ಕ್ಷೇತ್ರ ಸಿಗುತ್ತಿಲ್ಲ ಎದರು.
ವರುಣಾದಲ್ಲಿ ಸ್ಪರ್ಧೆ ಮಾಡ್ತೇನಿ ಅಂತಿದ್ದಾರೆ.ಅಪ್ಪನಿಗಾಗಿ ಮಗ ದೊಡ್ಡ ತ್ಯಾಗ ಮಾಡಿದ ರೀತಿ ಬಿಂಬಿಸಿಕೊಳ್ತಿದ್ದಾರೆ. ಆದರೂ ವರುಣಾದಲ್ಲಿ ಸೋಲುತ್ತೇನೆ ಅನ್ನೋ ಭಯಕ್ಕೆ ಮತ್ತೊಂದು ಕ್ಷೇತ್ರದಿಂದ ಸ್ಪರ್ಧೆ ಮಾಡಲು ಹೊರಟ್ಟಿದ್ದಾರೆ. ಕೋಲಾರ ಸೇರಿದಂತೆ ಬೇರೆ ಬೇರೆ ಕಡೆ ಕ್ಷೇತ್ರ ಹುಡುಕುತ್ತಿದ್ದಾರೆ.ಸಿದ್ದರಾಮಯ್ಯನವರು 224 ಕ್ಷೇತ್ರ ಸ್ಪರ್ಧೆ ಮಾಡಲಿ ಎಂದು ವ್ಯಂಗ್ಯವಾಡಿದರು.
..
ಜನರ ತಿರಸ್ಕೃತ ಕಾಂಗ್ರೆಸ್ ಪಕ್ಷ
ದೇಶದಲ್ಲೇ ಕಾಂಗ್ರೆಸ್ ಪಾರ್ಟಿ ಇಸ್ ರಿಜೆಕ್ಟ್ ಪಾರ್ಟಿ. ಮುಂಬರುವ ರಾಜಸ್ಥಾನ, ಛತ್ತೀಸಗಡ್ ರಾಜ್ಯದಲ್ಲೂ ಕಾಂಗ್ರೆಸ್ ಸೋಲುತ್ತೆ.ಈ ಬಾರಿ ರಾಜ್ಯದಲ್ಲಿ ಮೋದಿಯವರ ಕೆಲಸ ನೋಡಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net