ಬಿಜೆಪಿಯಿಂದ ಚುನಾವಣೆ ಪೂರ್ವಸಿದ್ಧತಾ ಸಭೆ

New bjp meeting
Published on

ಹುಬ್ಬಳ್ಳಿ : ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಇಲ್ಲಿನ ಅರವಿಂದ ನಗರದ ಪಕ್ಷದ ಕಚೇರಿಯಲ್ಲಿ ಮತದಾರರ ನೋಂದಣಿ ಹಾಗೂ ಚುನಾವಣೆ ಸಿದ್ಧತೆಯ ಪೂರ್ವ ಸಿದ್ಧತಾ ಸಭೆ ಶುಕ್ರವಾರ ಜರುಗಿತು.

ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಅವಳಿ ನಗರದಲ್ಲಿ 50 ರಿಂದ 60 ಸಾವಿರವರೆಗೆ ಪದವೀಧರರ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಬೇಕು ಎಂದರು.

ಬಿಜೆಪಿ ಅತಿ ಹೆಚ್ಚು ಮತಗಳ ಅಂತರದಿಂದ ಪಶ್ಚಿಮ ಪದವೀಧರ ಮತಕ್ಷೇತ್ರವನ್ನು ಮತ್ತೆ ಗೆಲ್ಲಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಪ್ರತಿಯೊಬ್ಬ ಪದವೀಧರ ಹೊಸತಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು ಎಂದು ಹೇಳಿದರು.

ವಸಂತ ನಾಡಜೋಶಿ, ಬಸವರಾಜ ಗರಗ, ಡಾ. ಮಹೇಶ ನಾಲವಾಡ, ಜಯತೀರ್ಥ ಕಟ್ಟಿ, ದತ್ತಮೂರ್ತಿ ಕುಲಕರ್ಣಿ, ಮಂಜುನಾಥ ಕಾಟಕರ, ರಾಜು ಕಾಳೆ, ಮಹೇಂದ್ರ ಕೌತಾಳ, ನಾರಾಯಣ ಜರತಾರಘರ, ಸುಧೀಂದ್ರ ದೇಶಪಾಂಡೆ, ಮಂಜುನಾಥ ಮಲ್ಲಿಗವಾಡ, ಸಿದ್ದು ಕಲ್ಯಾಣಶೆಟ್ಟರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net