

ಹುಬ್ಬಳ್ಳಿ: ಲೋಕಸಭೆ ಚುನಾವಣಾ ಬರುತ್ತಿದೆ, ಹಾಗಾಗಿ ಹಿಂದು-ಮುಸ್ಲಿಂ ವಿಷಯವನ್ನು ಬಿಜೆಪಿಯವರು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಲ ಲಾಡ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನಕ್ಕೆ ಅಲ್ಲಿನ ಪ್ರಧಾನಿ ನವಾಜ್ ಶರೀಫ್ ಅವರ ಮನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಿರಿಯಾನಿ ತಿನ್ನಲು ಹೋಗಿದ್ದರು. ಬಿಜೆಪಿಯವರು ಇದಕ್ಕೇನು ಹೇಳುತ್ತಾರೆ? ಎಂದು ಪ್ರಶ್ನೆ ಮಾಡಿದರು.
ಕೋವಿಡ್ ಕಾಲಘಟ್ಟದಲ್ಲಿ ಹಿಂದುಗಳ ಶವಸಂಸ್ಕಾರ ಮಾಡಿದವರು ಮುಸ್ಲಿಮರು. ಆಗ ಹಿಂದುವಾದಿಗಳು ಎಲ್ಲಿದ್ದರು? ಅರ್ಧಕ್ಕೂ ಹೆಚ್ಚು ಶವ ಸಂಸ್ಕಾರ ಮಾಡಿದ್ದಾರೆ ಮುಸ್ಲಿಮರು. ಬೇಕಿದ್ದರೆ ಚರ್ಚೆಗೆ ಬರಲಿ. ಇವರಿಗೆ (ಬಿಜೆಪಿಯವರಿಗೆ) ನಾಚಿಕೆ ಆಗಬೇಕು. ಶ್ರೇಷ್ಠ ಸಿಎಂ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನ ಮಾಡಿದ್ದಾರೆ. ಹಾಗಾಗಿ ಕೇಸ್ ಮಾಡಿದ್ದೀವಿ. ಐಸಿಸ್ ಸ್ಟೇಟ್ ಅಂತಾರೆ, ಬಿಜೆಪಿಯವರಿಗೆ ನಾಚಿಕೆ ಆಗಬೇಕು. ಹಿಂದು-ಮುಸ್ಲಿಮರ ಮಧ್ಯೆ ಜಗಳ ಹಚ್ಚೋದು ಬಿಜೆಪಿಯವರ ಕೆಲಸ. ಶ್ರೀಕಾಂತ ಪೂಜಾರಿ ಏನ್ ಮಹಾನ್ ವ್ಯಕ್ತಿನಾ? ಆತನ ಪರ ಬಿಜೆಪಿ ಹೋರಾಟ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.