ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿ ಹಲವಾರು ಯೋಜನೆ

WhatsApp Image 2023-05-03 at 2.16.58 PM
Published on

ಮಡಿಕೇರಿ: ಮಹಿಳೆಯರ ಸಬಲೀಕರಣಕ್ಕಾಗಿ ಬಿಜೆಪಿ ಸರ್ಕಾರ ಹಲವಾರು ಯೋಜನೆಯನ್ನು ಜಾರಿಗೆ ತಂದಿದ್ದು, ಇಂದು ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಂತೆ ಸರ್ಕಾರ ಮಾಡಿದೆ ಎಂದು ಬಿಜೆಪಿ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ ಹೇಳಿದರು.


ನವ ಭಾರತದಲ್ಲಿ ಮಹಿಳೆಯರು ಈಗ ರಾಷ್ಟ್ರ ನಿರ್ಮಾತೃಗಳಾಗಿದ್ದಾರೆ. ಭವಿಷ್ಯದ ಸಿದ್ಧ ಸಮಾಜಕ್ಕಾಗಿ ಮಹಿಳೆಯರು ಅಭಿವೃದ್ಧಿ ಪ್ರವಚನ ಮತ್ತು ನಿರ್ಧಾರದ ಕೇಂದ್ರವಾಗಿದ್ದಾರೆ. ಜಾತಿ ಮತ್ತು ಧರ್ಮಗಳನ್ನು ಮೀರಿ ಮಹಿಳೆಯರು ಬಿಜೆಪಿ ಹಿಂದೆ ಸಜ್ಜುಗೊಂಡಿದ್ದು, ಸಮಾಜ ಕಲ್ಯಾಣ ಮಾದರಿ ಯಶಸ್ಸನ್ನು ತೋರಿಸುತ್ತಿದೆ. ಅಲ್ಲದೇ, ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮುರವರ ಆಯ್ಕೆ ಶ್ಲಾಘನೀಯ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚದ ಜಿಲ್ಲಾ ಉಸ್ತುವಾರಿ ಉಷಾ ದೇವಮ್ಮ, ಮಡಿಕೇರಿ ನಗರಾಧ್ಯಕ್ಷೆ ಸವಿತಾ ರಾಕೇಶ್, ಮಡಿಕೇರಿ ಗ್ರಾಮಾಂತರ ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ಸೋಮವಾರಪೇಟೆ ಗ್ರಾಮಾಂತರ ಅಧ್ಯಕ್ಷೆ ಮಂಜುಳ ಸುಬ್ರಮಣಿ, ಉಪಾಧ್ಯಕ್ಷೆ ಭಾನುಮತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net