ಬಳ್ಳಾರಿ : ಸಂಡೂರಿನ ತೋರಣಗಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪತಿ, ಸಂಸದ ಈ.ತುಕಾರಾಮ್ ವಿರುದ್ಧದ ಸರಣಿ ಪೋಸ್ಟರ್‌ಗಳನ್ನು ಬಿಜೆಪಿ ಬಿಡುಗಡೆ ಮಾಡಿತು. ಸಂಸದ ಈ.ತುಕಾರಾಮ್ ನಾಲ್ಕು ಬಾರಿ ಶಾಸಕ, ಒಮ್ಮೆ ಸಂಸದ ಆದರೆ ಸಂಡೂರು ಅಭಿವೃದ್ಧಿ ಶೂನ್ಯ, ಜನರು ಇದನ್ನು ನೆನಪಿಟ್ಟುಕೊಂಡಿದ್ದಾರೆ ಹಾಗೂ ಬದಲಾವಣೆಗೆ ಬದ್ಧರಾಗಿದ್ದಾರೆ, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಲೂಟಿ, ತನ್ನ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದರೂ ಈ. ತುಕಾರಾಮ್ ಧ್ವನಿ ಎತ್ತಿಲ್ಲ ಎಂಬ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.