

ಚಿಕ್ಕಮಗಳೂರು: ಹಿಂದುಳಿದ, ದಲಿತ, ಬಡವರ, ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ. ಬಿಜೆಪಿಯವರಿಗೆ ರಾಜೀನಾಮೆ ಕೇಳಲು ಯಾವುದೇ ನೈತಿಕತೆ ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರ ಹಾಗೂ ಸಚಿವರು, ಶಾಸಕರ ಸಂಪೂರ್ಣ ಬೆಂಬಲ ಸಿದ್ದರಾಮಯ್ಯ ಅವರಿಗಿದೆ. ಕಾರ್ಯಕರ್ತರು ಅವರ ಬೆಂಬಲಕ್ಕೆ ನಿಂತಿದ್ದಾರೆ. ಸೈದ್ಧಾಂತಿಕ ಸಂಘರ್ಷಕ್ಕೆ ಕಾರ್ಯಕರ್ತರು, ಮುಖಂಡರು ಇಂದಿನಿAದಲೇ ಸಜ್ಜಾಗಿ ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಅವರಿಗೆ ಒಂದು ಸಿದ್ದಾಂತವಿದೆ. ಅವರು ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿದ್ದಾರೆ. ಸಿ.ಟಿ.ರವಿ, ಆರ್.ಅಶೋಕ್ ಅವರಂಥ ಸಾವಿರ ಮಂದಿ ಬಂದರೂ ಸಿದ್ದರಾಮಯ್ಯ ಅವರನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಗಾಳಿಯಲ್ಲಿ ಗುಂಡುಹೊಡೆಯುವ ಬಿಜೆಪಿ ಕೆಲಸ ಇಂದು ನಡೆಯುವುದಿಲ್ಲ. ಈ ವಿಚಾರದಲ್ಲಿ ಬಿಜೆಪಿಯವರು ಚಳವಳಿ ಮಾಡಿದರೆ ಅದಕ್ಕೆ ಪ್ರತಿಯಾಗಿ ನಾವೂ ಚಳವಳಿ ಮಾಡಬೇಕಾಗುತ್ತದೆ. ಮತೀಯ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ನ್ಯಾಯಾಲಯ ತನಿಖೆ ಮಾಡಿ ಎಂದಿದೆಯೇ ಹೊರತು ಸಿದ್ದರಾಮಯ್ಯ ಆರೋಪಿ ಎಂದು ಹೇಳಿಲ್ಲ. ಆದರೆ ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ಆರೋಪಿ ಸ್ಥಾನದಲ್ಲಿ ನಿಂತಿರುವAತೆ ಬಿಂಬಿಸುತ್ತಿದ್ದಾರೆ. ತನಿಖೆಗೆ ಆದೇಶ ಮಾಡಿದ್ದನ್ನೇ ದೊಡ್ಡ ಪ್ರಮಾದ ಎಂಬAತೆ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಿಜೆಪಿ ಅಧಿಕಾರವಧಿಯಲ್ಲಿ ಅನೇಕ ಸಚಿವರು, ಶಾಸಕರ ಮೇಲೆ ಭ್ರಷ್ಟಾಚಾರ, ವ್ಯಭಿಚಾರದ ಆರೋಪ ಕೇಳಿಬಂದಾಗ ಅವರೇಕೆ ರಾಜೀನಾಮೆ ನೀಡಿರಲಿಲ್ಲ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿ ಮುಖಂಡರಿಗೆ ಯಾವುದೇ ನೈತಿಕತೆ ಇಲ್ಲ. ಶೇ. ೮೦ ರಷ್ಟು ಲೂಟಿಕೋರರು ಆ ಪಕ್ಷದಲ್ಲಿ ಇದ್ದಾರೆ. ರಾಜ್ಯದ ಖಜಾನೆಯನ್ನು ಲೂಟಿ ಮಾಡಿದವರೂ ಇವರೇ. ಸಿದ್ದರಾಮಯ್ಯ ಅವರ ಬಗ್ಗೆ ಬೇರೆ ಯಾವುದೇ ಆಪಾದನೆಗಳಿಲ್ಲ. ಆದರೆ ಬಿಜೆಪಿ ಕೆಲ ನಾಯಕರ ಬಗ್ಗೆ ಗುರುತರ ಆರೋಪಗಳಿವೆ. ಮುಡಾ ಹಗರಣವನ್ನಿಟ್ಟುಕೊಂಡು ರಾಜ್ಯದ್ಯಂತ ಪ್ರತಿಭಟನೆಗೆ ಮುಂದಾಗಿರುವ ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಒಂದು ಪ್ರತಿ ಪಕ್ಷ ರಚನಾತ್ಮಕವಾಗಿ ಕಾರ್ಯನಿರ್ವಹಿಸಬೇಕಿತ್ತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಹಮದ್ ಅಕ್ಬರ್, ಹಿರೇಮಗಳೂರು ರಾಮಚಂದ್ರ, ಸಂತೋಷ್ ಲಕ್ಯಾ ಉಪಸ್ಥಿತರಿದ್ದರು.