ರಾಜ್ಯದಲ್ಲಿ ಬಿಜೆಪಿಗಿನ್ನು ಭವಿಷ್ಯವಿಲ್ಲ, ಅದೊಂದು ಮುಳುಗಿ ಹೋದ ಹಡಗು, ಕರ್ನಾಟಕದಲ್ಲಾದ ಸೋಲಿನಿಂದ ಮೋದಿ-ಷಾ ಇನ್ನೂ ಚೇತರಿಸಿಕೊಂಡಿಲ್ಲ…! ಸಚಿವ ಎಂ.ಬಿ. ಪಾಟೀಲ ಹೀಗೆ ಹೇಳಿದ್ದೇಕೆ?

M B PATIL DROUGHT MEETING
ವಿಜಯಪುರ ಜಿಪಂ ಸಭಾಂಗಣದಲ್ಲಿ ಸಚಿವ ಎಂ.ಬಿ. ಪಾಟೀಲರು ಬರ ನಿರ್ವಹಣೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.
Published on

ವಿಜಯಪುರ: ರಾಜ್ಯದಲ್ಲಿ ಬಿಜೆಪಿಗಿನ್ನು ಭವಿಷ್ಯವಿಲ್ಲ, ಅದೊಂದು ಮುಳಗುತ್ತಿರುವ ಹಡಗು ಅಲ್ಲ; ಈಗಾಗಲೇ ಮುಳುಗಿ ಹೋದ ಹಡಗು, ಕರ್ನಾಟಕದಲ್ಲಾದ ಸೋಲಿನಿಂದ ಮೋದಿ-ಷಾ ಇನ್ನೂ ಚೇತರಿಸಿಕೊಂಡಿಲ್ಲ…! ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ ವಿಧಾನ ಸಭೆ ಚುನಾವಣೆ ಸಂದರ್ಭ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ಪಡೆದು ವಂಚನೆ ಮಾಡಿದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದರು.
ಈ ಹಿಂದೆ ಬಿಜೆಪಿಯ 40 ಪರ್ಸೆಂಟ್ ಸರ್ಕಾರವನ್ನು ನೋಡಿದ್ದೇವೆ. ಈವರೆಗೂ ಒಬ್ಬ ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಮೋದಿ-ಅಮೀತ್ ಶಾ ಅವರು ಕರ್ನಾಟಕದ ಸೋಲಿನಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇಲ್ಲಿನ ನಾಯಕರ ಮೇಲಿನ ಸಿಟ್ಟಿನಿಂದ ವಿರೋಧ ಪಕ್ಷದ ನಾಯಕರ ನೇಮಕ ಹಾಗೂ ಅಧ್ಯಕ್ಷರ ಬದಲಾವಣೆಯಾಗಿಲ್ಲ. ಇದು ಅವರ ಪಕ್ಷದ ಕಥೆ, ರಾಜ್ಯದಲ್ಲಿ ಬಿಜೆಪಿಯದ್ದು ಮುಗಿದು ಹೋದ ಕಥೆ, ಇನ್ನೆಂದೂ ಬಿಜೆಪಿ ತಲೆ ಎತ್ತಿ ನಿಲ್ಲಲಾಗಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net