

ಶಿರಸಿ: ಬನವಾಸಿ ಭಾಗದಲ್ಲಿ ವರದಾ ನದಿ ನೆರೆ ಪೀಡಿತ ಭಾಶಿ ಪಂಚಾಯಿತಿ ವ್ಯಾಪ್ತಿಯ ಮೊಗಳ್ಳಿ ಗ್ರಾಮಕ್ಕೆ ಬಿಜೆಪಿಯ ನಿಯೋಗ ಇತ್ತೀಚೆಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು.
ಬೆಳೆ, ಮನೆಗಳ ಹಾನಿ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದು ನಿಯೋಗ ತಿಳಿಸಿತು.
ನಿಯೋಗದಲ್ಲಿ ಬಿಜೆಪಿಯ ರಾಜ್ಯ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣನಮನೆ, ರಾಜ್ಯ ರೈತ ಮೋರ್ಚಾದ ಸದಸ್ಯ ಗಣೇಶ ಸಣ್ಣಲಿಂಗಣ್ಣನವರ, ಜಿಲ್ಲಾ ಕಾರ್ಯಕಾರಿಣಿಯ ಸದಸ್ಯ ಅರವಿಂದ ಶೆಟ್ಟರ್, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಪ್ರೇಮಕುಮಾರ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಎಲ್. ಟಿ. ಪಾಟೀಲ, ಜಿಲ್ಲಾ ಹಿಂದುಳಿದ ಮೋರ್ಚಾದ ಸದಸ್ಯ ವಿಶ್ವನಾಥ ಹಾದಿಮನಿ, ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ, ಬನವಾಸಿ ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ ನಾಯ್ಕ ಮುಂಡಗೋಡ, ಗ್ರಾಮೀಣ ಮಂಡಳದ ಅಧ್ಯಕ್ಷರಾದ ಮಂಜುನಾಥ ಪಾಟೀಲ,ಉಮೇಶ ಭಾಗ್ವತ ಇತರರು ಇದ್ದರು.