

ಹುಬ್ಬಳ್ಳಿ: ಮಹಾನಗರ ಜಿಲ್ಲಾ ಹಾಗೂ ಧಾರವಾಡ ಗ್ರಾಮಾಂತರ ರೈತ ಮೋರ್ಚಾ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಗ್ರಾಮ ಪರಿಕ್ರಮ ಯಾತ್ರಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಮಾತನಾಡಿ, ಪ್ರತಿಯೊಬ್ಬ ರೈತ ಮೋರ್ಚಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಳ್ಳಿಹಳ್ಳಿಗೆ ಹೋಗಿ ನರೇಂದ್ರ ಮೋದಿ ಅವರ ಯೋಜನೆಗಳನ್ನು ಮನೆ ಮನಗಳಿಗೆ ತಲುಪಿಸಬೇಕು ಎಂದರು.
ಮೋದಿಜಿ ಅವರನ್ನು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಮಾಡಬೇಕು. ದೇಶದ ಅಭಿವೃದ್ಧಿ ವೇಗವನ್ನು ಇನ್ನೂ ಹೆಚ್ಚು ಮಾಡಬೇಕು. ಆಹಾರ ಧಾನ್ಯ ಬೆಳೆಯುವಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಮುಂದಿನ ಐದು ವರ್ಷಗಳಲ್ಲಿ ವಿಶ್ವದ ಮೊದಲ ಸ್ಥಾನದಲ್ಲಿ ಬರಬೇಕು ಎಂದರು.
ಕೇಂದ್ರ ಸರ್ಕಾರ ಕಬ್ಬಿನಿಂದ ಎಥೆನಾಲ್ ಉತ್ಪಾದಿಸುವ ಯೋಜನೆ ರೂಪಿಸಿರುವುದರಿಂದ ಕಬ್ಬು ಬೆಳೆಗಾರರಿಗೆ ಮುಂದಿನ ದಿನಗಳು ಅತಿ ಉತ್ತಮವಾಗಿವೆ ಎಂದರು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿಮೌಳಿ ಕುಲಕಣಿರ್, ರಾಜ್ಯ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ, ಮಹಾನಗರ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಈಶ್ವರಗೌಡ ಪಾಟೀಲ್, ಗ್ರಾಮಾಂತರ ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಕಾರಿಕಾಯಿ, ರುದ್ರಯ್ಯ ಚಿಕ್ಕಮಠ, ಬಸವರಾಜ್ ಜಾಬೀನ, ಬಸವಣ್ಣೆಪ್ಪ ಬಾಳಿಗಾ, ರುದ್ರಯ್ಯ ಚಿಕ್ಕಮಠ, ಲೋಕೇಶ್ ಗುಂಜಾಳ, ರಾಜು ಕೋರ್ಯಾಣಮಠ, ಚನ್ನಬಸಪ್ಪ ಯಲಬುಗಿರ್, ಇತರರು ಉಪಸ್ಥಿತರಿದ್ದರು.