ಬಿಜೆಪಿ ಸರ್ಕಾರದ ಸಾಧನೆ ಜನರಿಗೆ ತಿಳಿಸಿ

7gok2-Web
ಅಕ್ಕತಂಗೇರಹಾಳ ಗ್ರಾಮದಲ್ಲಿ ಕರ ಪತ್ರ ವಿತರಣೆಗೆ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು. ಸುಭಾಷ ಪಾಟೀಲ, ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಭೀಮಗೌಡರ ಪೊಲೀಸಗೌಡರ, ಮುನ್ನಾ ದೇಸಾಯಿ ಮತ್ತಿತರರು ಇದ್ದರು.
Published on

ಗೋಕಾಕ: ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಅವರು ಕೇಂದ್ರ ಸರ್ಕಾರ ಎರಡನೇ ಅವಧಿಗೆ ಒಂದು ವರ್ಷ ಅಧಿಕಾರ ಪೂರೈಸಿದ ನಿಮಿತ್ತ ಬಿಜೆಪಿ ಸರ್ಕಾರದ ಸಾಧನೆಗಳ ಕರ ಪತ್ರ ವಿತರಣೆ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್, ಜಲಜೀವನ ಮಿಷನ್, 60 ವರ್ಷ ದಾಟಿದ ರೈತರು, ಕೃಷಿ ಕಾರ್ಮಿಕರು, ಸಣ್ಣ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ 400ಕ್ಕೂ ಅಧಿಕ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣ ಸೇರಿ ಅನೇಕ ಐತಿಹಾಸಿಕ ಕಾರ್ಯಗಳನ್ನು ಮೋದಿ ಸರ್ಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಡಿದೆ. ಈ ಎಲ್ಲ ಕಾರ್ಯಗಳನ್ನು ಮನೆ ಮನೆಗಳಿಗೆ ತಿಳಿಸುವ ಕಾರ್ಯ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಮಾಡಬೇಕಾಗಿದೆ ಎಂದರು.

ನಂತರ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಕಾರ್ಯಕರ್ತರೊಂದಿಗೆ ವಿವೇಕಾನಂದ ನಗರದಲ್ಲಿಯ ಮನೆ ಮನೆಗಳಲ್ಲಿ ತೆರಳಿ ಮೋದಿ ಸರ್ಕಾರದ ಒಂದು ವರ್ಷದ ಸಾಧನೆಗಳ ಕರ ಪತ್ರಗಳನ್ನು ವಿತರಿಸಿ ಕರಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಸುಭಾಷ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಟಿ.ಆರ್.ಕಾಗಲ, ಮಡೆಪ್ಪ ತೋಳಿನವರ, ಭೀಮಗೌಡರ ಪೊಲೀಸಗೌಡರ, ಮುನ್ನಾ ದೇಸಾಯಿ, ಅಡಿವೆಪ್ಪ ನಾವಲಗಟ್ಟಿ, ಶಶಿಧರ ದೇಮಶಟ್ಟಿ, ತವನಪ್ಪ ಬೆನ್ನಾಡಿ, ಬಸವರಾಜ ಹಿರೇಮಠ, ಶಕೀಲ ಧಾರವಾಡಕರ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net