ಕಾಂಗ್ರೆಸ್ಸಿನ ಗ್ಯಾರಂಟಿಗಳು ಡಿಸ್ಕೌಂಟ ಸೀರೆ ಇದ್ದಂತೆ: ನಟಿ ತಾರಾ

oplus_2
oplus_2
Published on

ವಿಜಯವಾಣಿ ಸುದ್ದಿಜಾಲ ಗದಗ

ತಾಯಿ ಎಂಬವಳು ಮನೆಯಲ್ಲಿ ಇದ್ದಾಗ ಮನೆ ಸ್ವರ್ಗ. ಪತಿ, ಮಕ್ಕಳು ಹಾಗೂ ಮನೆ ನಿರ್ವಹಣೆ ಅಚ್ಚು ಕಟ್ಟಾಗಿ ನಿಭಾಯಿಸುತ್ತಾಳೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಎಂಬ ಮನೆಗೆ ತಾಯಿ ಇದ್ದಂತೆ. ಕಳೆದ ಹತ್ತು ವರ್ಷಗಳಿಂದ ಮನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ನಮ್ಮ ಮನೆ ಚೆನ್ನಾಗಿ ನಿರ್ವಹಣೆ ಆಗಬೇಕೆಂದರೆ ನರೇಂದ್ರ ಮೋದಿ ಅವರನ್ನು ಬಲಪಡಿಸಲು ಬಿಜೆಪಿಗೆ ಮತ ಹಾಕಬೇಕು ಎಂದು ನಟಿ, ಬಿಜೆಪಿ ಮುಖಂಡೆ ತಾರಾ ಹೇಳಿದರು.

ನಗರದ ಹುಡ್ಕೊ ಕಾಲನಿಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ ಅವರು, ಬಿಜೆಪಿ ಸಾಧನೆಗಳನ್ನು ವಿವರಿಸಿದರು. ಕಾಂಗ್ರೆಸ್ಸಿನ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ ಅವರು ಗ್ಯಾರಂಟಿಗಳು ಡಿಸ್ಕೌಂಟ ಸೀರೆ ಇದ್ದಂತೆ. ಅಂಗಡಿಗಳಲ್ಲಿ ಸೀರಿಗಳಿಗಾಗಿ ಡಿಸ್ಕೌಂಟ ಬೋರ್ಡ್ ಹಾಕಿರುತ್ತಾರೆ. ಡಿಸ್ಕೌಂಟ ನಂಬಿದ ಮಹಿಳೆಯರು ಅದೇ ಅಂಗಡಿಗೆ ಹೋಗಿ ಡಿಸ್ಕೌಂಟ ಪಡೆದು ಸೀರೆ ತಂದು ಖುಷಿ ಪಡುತ್ತಾರೆ. ಆದರೆ ಸೀರೆಯ ಮೂಲ ಬೆಲೆ ಡಿಸ್ಕೌಂಟಗಿಂತಲೂ ಕಡಿಮೆ ಇರುತ್ತದೆ ಎಂಬುದು ಮಹಿಳೆಯರಿಗೆ ಗೊತ್ತಿರುವುದಿಲ್ಲ. ಅಂತಹ ಸಿರೇಗಳು ಬಾಳಿಕೆಯೇ ಬರುವುದಿಲ್ಲ. ಮಹಿಳೆಯರು ಮೋಸಹೋಗುತ್ತಾರೆ. ಗ್ಯಾರಂಟಿ ಯೋಜನೆಗಳು ಅದೇ ರೀತಿ ಮಹಿಳೆಯರಿಗೆ ಮೋಸ ಮಾಡುವ ಯೋಜನೆಗಳಾಗಿವೆ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ಭಾರತದ ಭವಿಷ್ಯಕ್ಕಾಗಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ಮತ ನೀಡಬೇಕು. ಬಿ.ಎಸ್. ಯಡಿಯೂರಪ್ಪ ಮತ್ತು ಎಚ್.ಡಿ. ದೇವೇಗೌಡರು ದೈವ ಪುತ್ರರು ಇದ್ದಂತೆ. ರಾಜ್ಯಕ್ಕೆ ಅವರ ಅಭಿವೃದ್ಧಿ ಕೊಡುಗೆ ಗಮನಿಸಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಮಾತನಾಡಿ, 2014 ಕ್ಕಿಂತ ಮೊದಲು ವಿದೇಶಗಳಿಂದ ಭಾರತಕ್ಕೆ ಅನೇಕ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ಭಾರತ ಪರಾವಲಂಭಿ ಆಗದೇ ಸ್ವಾವಲಂಭಿ ಆಗಿದೆ. ವಿಶ್ವದ ಮುಂದೆ ಭಾರತ ದೇಶ ತಲೆ ಎತ್ತಿ ನಿಲ್ಲುವಂತೆ ಪ್ರಧಾನಿ ನರೇಂದ್ರ ಆಡಳಿತ ನಡೆಸುತ್ತಿದ್ದಾರೆ. ನಮ್ಮ ಯುವಕರಿಗಾಗಿ ಬಿಜೆಪಿಗೆ ಮತ ನೀಡಬೇಕು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಉಷಾ ದಾಸರ, ಮಹೇಶ ದಾಸರ, ವಿಜಯಕುಮಾರ ಗಡ್ಡಿ, ಶಶೀಧರ ದಿಂಡೂರು, ಅನಿತಾ ಗಡ್ಡಿ, ಬಸವಣ್ಣೆಯ್ಯ ಹಿರೇಮಠ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net