ಸ್ಥಳಿಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಿಜೆಪಿ ಸದಸ್ಯರಲ್ಲಿ ಮೂಡದ ಒಗ್ಗಟ್ಟು

IMG-20240905-WA0005
Published on

ಶಿವಾನಂದ ಹಿರೇಮಠ, ಗದಗ
ಜಿಲ್ಲೆಯ ಸ್ಥಳಿಯ ಪುರಸಭೆ, ಪಟ್ಟಣ ಪಂಚಾಯಿತಿ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ಎದುರಾಗುತ್ತಿದೆ. ಆಯಾ ಸ್ಥಳಿಯ ಸಂಸ್ಥೆಯ ಬಿಜೆಪಿಯ ಸದಸ್ಯರಲ್ಲಿ ಎರಡು ಒಗ್ಗಟ್ಟು ಮೂಡದ ಪರಿಣಾಮ ಕಾಂಗ್ರೆಸ್​ ಪಕ್ಷಕ್ಕೆ ಲಾಭವಾಗುತ್ತಿದೆ, ಪಕ್ಷದಿಂದ ಅಧಿಕೃತವಾಗಿ ನಾಮಪತ್ರ ಸಲ್ಲಿಸುತ್ತಿರುವ ಅಭ್ಯಥಿರ್ಗಳಿಗೆ ಕೈಕೊಟ್ಟು, ಬಂಡಾಯವೆದ್ದ ಕೆಲ ಬಿಜೆಪಿ ಸದಸ್ಯರು ಕಾಂಗ್ರೆಸ್​ ಸದಸ್ಯರ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಅಧಿಕಾರ ಅನುಭವಿಸಿ ಕಾಂಗ್ರೆಸ್​ ಬೆಂಬಲ ಪಡೆಯುತ್ತಿರುವ ಬಂಡಾಯ ಬಿಜೆಪಿ ಸದಸ್ಯರ ನಡೆಯಿಂದ ಜಿಲ್ಲಾ ಬಿಜೆಪಿ ಮುಖಂಡರಿಗೆ ಮುಜುಗುರ ಉಂಟಾಗುತ್ತಿದೆ. ಸ್ಥಳಿಯ ಸಂಸ್ಥೆಗಳಲ್ಲಿ ಬಹುಮತ ಸಂಖ್ಯಾಬಲ ಇದ್ದರೂ ಸಹ ಪಕ್ಷದ ಅಧಿಕೃತ ಅಭ್ಯಥಿರ್ಯನ್ನು ಗೆಲ್ಲಿಸಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ.
ಸ್ಥಳಿಯ ನಾಯಕರೊಂದಿಗೆ ವೈಮನಸ್ಸು, ತಾರತಮ್ಯ ಆರೋಪ, ಅಧಿಕಾರದ ಆಸೆಯಿಂದಾಗಿ ಚುನಾವಣಾ ಪೂರ್ವದಲ್ಲೇ ಬಿಜೆಪಿಯಿಂದ ಬಂಡಾಯ ಎದ್ದು ಕಾಂಗ್ರೆಸ್​ ಸದಸ್ಯರೊಂದಿಗೆ ಚುನಾವಣಾ ದಿನದಂದೇ ಪುರಸಭೆ, ಪಟ್ಟಣ ಪಂಚಾಯಿತಿ ಆವರಣದಲ್ಲಿ ಪ್ರತ್ಯಕ್ಷರಾಗುತ್ತಿದ್ದಾರೆ. ಬಂಡಾಯ ಸದಸ್ಯರ ನಡೆಯಿಂದ ಸ್ಥಳಿಯ ನಾಯಕರಿಗೂ ತಲೆನೋವಾಗಿ ಅಧಿಕಾರಿ ಕೈಚೆಲ್ಲುತ್ತಿದ್ದಾರೆ.

ಮುಂಡರಗಿ ಪುರಸಭೆ:
ಮುಂಡರಗಿ ಪುರಸಭೆಯಲ್ಲಿ 15 ಜನ ಬಿಜೆಪಿ ಸದಸ್ಯರಿದ್ದರೂ ಒಗ್ಗಟ್ಟಿಲ್ಲ. ಚುನಾವಣಾ ಪೂರ್ವದಲ್ಲಿ ಕೆಲ ಬಂಡಾಯ ಬಿಜೆಪಿ ಅಭ್ಯಥಿರ್ಗಳು ಮುಂಡರಗಿ ಪಟ್ಟಣದಿಂದ ಹೈಜಾಕ್​ ಆಗಿದ್ದರು. ಚುನವಣಾ ದಿನವೇ ಪುರಸಭೆ ಆವರಣದಲ್ಲಿ ಪ್ರತ್ಯಕ್ಷರಾಗಿ ಬಂಡಾಯ ಅಭ್ಯಥಿರ್ಗೆ ಬೆಂಬಲ ನೀಡಿದ್ದರು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 15 ಬಿಜೆಪಿ ಸದಸ್ಯರ ಪೈಕಿ 7 ಜನ ಬಿಜೆಪಿ ಸದಸ್ಯರು ಬಂಡಾಯದ ಬಿಜೆಪಿ ಅಭ್ಯಥಿರ್ಗೆ ಮತಚಲಾಯಿಸಿ ಗೆಲ್ಲಿಸಿದ್ದಾರೆ. 5 ಜನ ಕಾಂಗ್ರೆಸ್​ ಸದಸ್ಯರು ಮತ್ತು 7 ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಬಂಡಾಯ ಅಭ್ಯಥಿರ್ ನೀರ್ಮಲಾ ಕೊರ್ಲಹಳ್ಳಿ ಅವರು ಬಿಜೆಪಿಯ ಅಧಿಕೃತ ಅಭ್ಯಥಿರ್ ಜ್ಯೋತಿ ಹಾನಗಲ್​ ಅವರ ವಿರುದ್ಧ ಗೆಲವು ಸಾಧಿಸಿ ಅಧ್ಯಕ್ಷರಾಗಿದ್ದಾರೆ

ಲೆ$್ಮಶ್ವರ ಪುರಸಭೆ:
ಸರ್ವವರಿಗೂ ಸಮಬಾಳು, ಸಮ ಪಾಲು ಎಂಬ ನಾನ್ನುಡಿಯಂತೆ ಕಾಂಗ್ರೆಸ್​, ಬಿಜೆಪಿ ಸದಸ್ಯರು ಕಳೆದ 15 ವರ್ಷಗಳಿಂದ ಪಾತೀತವಾಗಿ ಅಧಿಕಾರ ನಡೆಸುಕೊಂಡು ಬಂದಿದ್ದ ಲೆ$್ಮಶ್ವರ ಪುರಸಭೆಯಲ್ಲಿ ಈ ಬಾರಿ ಬಿಜೆಪಿ ಒಡೆದ ಮನೆಯಂತಾಗಿದೆ. ಬಿಜೆಪಿ ಪಕ್ಷದ ವಿಪ್​ ಉಲ್ಲಂಘಿಸಿದ ಬಿಜೆಪಿ ಸದಸ್ಯೆ ಯಲ್ಲವ್ವ ದುರ್ಗಣ್ಣವರ ಅವರು ಪಾಂತರಗೊಂಡು ಕಾಂಗ್ರೆಸ್​ ಸೇರ್ಪಡೆಯಾಗಿ ಕಾಂಗ್ರೆಸ್ಸಿನ 9, ಜೆಡಿಎಸ್​ ಒಬ್ಬರು ಹಾಗೂ ಪಕ್ಷೇತರ 5 ಸದಸ್ಯರ ಬೆಂಬಲದೊಂದಿಗೆ ಯಲ್ಲವ್ವ ಅಧ್ಯಕ್ಷರಾದರು. ಉಪಾಧ್ಯಕ್ಷರಾಗಿ ಕಾಂಗ್ರೆಸ್​ ಸದಸ್ಯ ಫಿರದೋಷ ಆಡೂರು ಆಯ್ಕೆ ಆದರು. ಪಾಂತರ ನಿಷೇಧ ಕಾಯಿದೆಯಡಿ ಕಾನೂನು ಸಮಯರಕ್ಕೆ ಬಿಜೆಪಿ ಮುಂದಡಿ ಇಟ್ಟಿದೆ ಎನ್ನಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ ಅವರು ಯಲ್ಲವ್ವ ದುರ್ಗಣ್ಣವರ ಮೇಲೆ ಪಾಂತರ ನಿಷೇಧ ಕಾಯಿದೆ ಅಡಿ ಕ್ರಮ ಮತ್ತು ಸದಸ್ಯತ್ವ ರದ್ದು ಗೊಳಿಸಲು ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಬಿಜೆಪಿಯಿಂದ ಅಧಿಕೃತವಾಗಿ ಕವಿತಾ ಶರಸೂರಿ ಬಿಜೆಪಿ ನಾಪತ್ರ ಸಲ್ಲಿಸಿದ್ದರು.

ನರೇಗಲ್​ ಪಪಂ:
ಈ ಹಿಂದೆ ಬಿಜೆಪಿಯಿಂದ ಸದಸ್ಯರಾಗಿ, ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದರೂ ಸಹ ಈ ಬಾರಿ ಬಿಜೆಪಿ ಪಕ್ಷದ ಅಧಿಕೃತ ಅಭ್ಯಥಿರ್ ವಿರುದ್ಧ ಅಧಿಕಾರ ಅನುಭವಿಸಿದವರೇ ಬಂಡಾಯವೆದ್ದ ನಿದರ್ಶನ ನರೇಗಲ್​ ಪಪಂ ಬಿಜೆಪಿ ಸದಸ್ಯರದ್ದಾಗಿದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕ್ಕೀರಪ್ಪ ಮಳ್ಳಿ, ಅಧ್ಯಕ್ಷರಾಗಿದ್ದ ವಿಜಲಕ್ಷಿ$್ಮಚಲವಾದಿ ಮತ್ತು ಉಪಾಧ್ಯಕ್ಷರಾಗಿದ್ದ ಕುಮಾರಸ್ವಾಮಿ ಕೋರಧಾನ್ಯಮಠ ಅವರು ಈ ಬಾರಿ ಬಿಜೆಪಿ ಅಭ್ಯಥಿರ್ ವಿರುದ್ಧವೇ ಬಂಡಾಯ ಘೋಷಿಸಿದ್ದರು. ಕಾಂಗ್ರೆಸ್​ 3, ಪಕ್ಷೇತರ 1 ಹಾಗೂ ಬಿಜೆಪಿಯ 5 ಜನ ಬೆಂಬಲದೊಂದಿಗೆ ಕ್ಕೀರಪ್ಪ ಮಳ್ಳಿ ಅಧ್ಯಕ್ಷರಾಗಿ, ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷರಾದರು. ಬಿಜೆಪಿ ಯಿಂದ ಅಧಿಕೃತವಾಗಿ ಮಲ್ಲಿಕಾರ್ಜುನಗೌಡ ಬೂಮನಗೌಡರ ನಾಪಪತ್ರ ಸಲ್ಲಿಸಿದ್ದರು.

ಗಜೇಂದ್ರಗಡ: ಗಜೇಂದ್ರಗಡ ಪುರಸಭೆಯಲ್ಲಿ ಬಿಜೆಪಿ ನಿರೀೆಗಳೆಲ್ಲ ಹುಸಿಯಾಗಿವೆ. 23 ಜನ ವಾರ್ಡ ಸದಸ್ಯರಲ್ಲಿ 18 ಬಿಜೆಪಿ ಸದಸ್ಯರಿದ್ದರೂ ಸಹ ಬಿಜೆಪಿಯ ಅಧಿಕೃತ ಅಭ್ಯಥಿರ್ ಬದಲಾಗಿ ಕಾಂಗ್ರೆಸ್​ ಬೆಂಬಲಿತ ಬಿಜೆಪಿ ಅಭ್ಯಥಿರ್ ಗೆಲವು ಸಾಧಿಸಿದ್ದಾರೆ. 18 ಜನ ಬಿಜೆಪಿ ಸದಸ್ಯರಲ್ಲಿ 7 ಜನ ಬಿಜೆಪಿ ಸದಸ್ಯರು ಮತ್ತು 5 ಜನ ಕಾಂಗ್ರೆಸ್​ ಸದಸ್ಯರ ಬೆಂಬಲದೊಂದಿಗೆ ಬಂಡಾಯ ಬಿಜೆಪಿ ಅಭ್ಯಥಿರ್ ಸುಭಾಷ ಮ್ಯಾಗೇರಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ಸಿನ ಸವಿತಾ ಬಿದರಹಳ್ಳಿ ಉಪಾಧ್ಯಕ್ಷರಾದರು. ಬಿಜೆಪಿ ಅಧಿಕೃತವಾಗಿ ಯಮನಪ್ಪ ತಿರಕೋಜಿ ಬಿಜೆಪಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆ ಹಿಂದಿನ ದಿನ ಬಂಡಾಯ ಬಿಜೆಪಿ ಸದಸ್ಯರು ಹೈಜಾಕ್​ ಆಗಿದ್ದರು ಎನ್ನಲಾಗಿದೆ. ಬಿಜೆಪಿಯಲ್ಲಿ ಬಣಗಳ ಸೃಷ್ಟಿಯಾದ ಪರಿಣಾಮ ಬಂಡಾಯ ಬಿಜೆಪಿ ಅಭ್ಯಥಿರ್ಗಳು ರಾಜೀನಾಮೆ ನೀಡಬೇಕೆಂದು ಬಂಡಾಯ ಸದಸ್ಯರ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 8ನೇ ವಾರ್ಡನಲ್ಲಿ ಬುಧವಾರ ಕಾಂಗ್ರೆಸ್​ ಬಿಜೆಪಿ ಸದಸ್ಯರು ಕೈಕೈ ಮೀಲಾಯಿಸಿದ್ದಾರೆ ಎನ್ನಲಾಗಿದೆ. ಮಾಜಿ ಶಾಸಕ ಕಳಕಪ್ಪ ಬಂಡಿ ಅವರು ಪೊಲೀಸ್​ ಠಾಣೆ ಮೆಟ್ಟಿಲೇರಿ ಪ್ರಕರಣವನ್ನು ಶಮನಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.ಗದಗ ನಗರಸಭೆ ಚುನಾವಣೆ ದಿನಾಂಕ ಇನ್ನೂ ಘೋಷಣೆ ಆಗಿಲ್ಲ. ಆದರೂ, ಆಪರೇಷನ್​ ಹಸ್ತದ ಬೀತಿ ಬಿಜೆಪಿ ಪಾಳಯದಲ್ಲಿ ಶುರುವಾಗಿದೆ. ಮಾಜಿ ಸಚಿವ ಮತ್ತು ಶಾಸಕ ಸಿ.ಸಿ. ಪಾಟೀಲ ಪ್ರತಿನಿಧಿಸುವ ನರಗುಂದ ಕ್ಷೇತ್ರದ ನರಗುಂದ ಪುರಸಭೆಯಲ್ಲಿ ಬಿಜೆಪಿ ತನ್ನ ಹಿಡಿತ ಗಟ್ಟಿಗೊಳಿಸಿ ಅಧಿಕಾರಕ್ಕೇರಿದೆ. ರೋಣ ಪುರಸಭೆ ಚುನಾವಣೆ ಸೆ. 9 ರಂದು ಜರುಗಲಿದ್ದು ಕಾಂಗ್ರೆಸ್​ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಶಿರಹಟ್ಟಿಯಲ್ಲಿ ಪಪಂ ನಲ್ಲಿ ಸಂಖ್ಯಾಬಲ ಇರುವ ಕಾಂಗ್ರೆಸ್​ ಸಾರಾಗವಾಗಿ ಅಧಿಕಾರಕ್ಕೇರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net