17ರ ಶೃಂಗೇರಿ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ

16bhr 6 bhaskar
ಭಾಸ್ಕರ್ ವೆನಿಲ್ಲಾ
Published on

ಬಾಳೆಹೊನ್ನೂರು: ಮಲೆನಾಡಿಗೆ ಮಾರಕವಾಗಿರುವ ಒತ್ತುವರಿ ತೆರವು ವಿಚಾರವಾಗಿ ಶೃಂಗೇರಿ ಕ್ಷೇತ್ರದಲ್ಲಿ ಶನಿವಾರ ನಡೆಯುವ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಕೇಂದ್ರೀಯ ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ತಿಳಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಶಾಸಕರ ಬೇಜವಬ್ದಾರಿಯಿಂದ ಇಂದು ಮಲೆನಾಡಿನ ಜನರು ಕಷ್ಟ ಅನುಭವಿಸುವಂತಾಗಿದೆ. ಕಾಂಗ್ರೆಸ್ ಮಲೆನಾಡಿನ ರೈತರಿಗೆ ಮಾರಕವಾಗಿರುವ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿ ರೈತರೂ, ಕೂಲಿ ಕಾರ್ಮಿಕರ ಬದುಕು ದುಸ್ತರವಾಗುವಂತೆ ಮಾಡುತ್ತಿದೆ ಎಂದು ಹೇಳಿಕೆಯಲ್ಲಿ ದೂರಿದ್ದಾರೆ.
ಮಲೆನಾಡಿನ ಬದುಕು ಅಸ್ತವ್ಯಸ್ತವಾಗಲು ರಾಜ್ಯ ಸರ್ಕಾರದ ಕೆಲ ನೀತಿಗಳೇ ಮುಖ್ಯಕಾರಣ. ಇವುಗಳ ಕಡೆ ಗಮನಹರಿಸಿ ಸರ್ಕಾರ ಹಾಗೂ ಜೀವಂತ ಶವವಾಗಿರುವ ಜಿಲ್ಲಾಡಳಿತದ ಕಿವಿ ಹಿಂಡಿ ಮಲೆನಾಡಿನಲ್ಲಿ ಸರಿಯಾದ ಮಾರ್ಗದಲ್ಲಿ ರೂಪುರೇಷೆ ರೂಪಿಸುವಂತೆ ಒತ್ತಾಯಿಸಿ ಹಾಗೂ ತೆರವು ಕಾರ್ಯಾಚರಣೆ ವಿರುದ್ಧ ಕೊಪ್ಪದಲ್ಲಿ ನಡೆಯಲಿರುವ ಪ್ರತಿಭಟನೆ ಹಾಗೂ ಕ್ಷೇತ್ರದ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net