ಭದ್ರಾವತಿಯಲ್ಲಿ ಹಬ್ಬದ ವಾತಾವರಣ

web
Published on

ಭದ್ರಾವತಿ: ಬಹುನಿರೀಕ್ಷಿತ ಆರ್​ಎಎಫ್ (ರ್ಯಾಪಿಡ್ ಆಕ್ಷನ್ ಫೋರ್ಸ್) ಘಟಕದ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಹಿನ್ನೆಲೆಯಲ್ಲಿ ಉಕ್ಕಿನ ನಗರಿಯ ಎಲ್ಲೆಡೆ ಬಂಟಿಂಗ್ಸ್, ಪ್ಲೆಕ್ಸ್, ಧ್ವಜಗಳು ಹಾರಾಡುವ ಮೂಲಕ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಹೇಳಿದರು.

ಲೋಕಸಭಾ ಸದಸ್ಯರು ಕ್ಷೇತ್ರದ ತಾಲೂಕುಗಳಿಗೂ ಕೇಂದ್ರ ಸರ್ಕಾರದ ಯೋಜನೆಗಳನ್ನು ಕೊಡುಗೆಯಾಗಿ ನೀಡಿದ್ದು ಅಂತಹ ಯೋಜನೆಗಳಲ್ಲಿ ಭದ್ರಾವತಿಗೆ ಆರ್​ಎಎಫ್ ಘಟಕ ಸ್ಥಾಪನೆ ಕೂಡ ಒಂದಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ಮಧ್ಯಾಹ್ನ 12.45ಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಈ ಕಾರ್ಯಕ್ರಮಕ್ಕೆ ಭದ್ರಾವಯಿತಿಯ 8 ಸಾವಿರ ಹಾಗೂ ಜಿಲ್ಲೆಯಿಂದ 2 ಸಾವಿರ ಜನರು ಸೇರá-ವ ನಿರೀಕ್ಷೆಯಿದ್ದು ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಲ್ಲರನ್ನೂ ತಪಾಸಣೆ ಮೂಲಕ ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸುತ್ತಿರುವುದರಿಂದ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮಕ್ಕೆ ಆಗಮಿಸಬೇಕು. ಪಾಸ್ ಇರುವವರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net