

ಕೊಪ್ಪಳ: ರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಲವಾಗಿದೆ. ರಾಮೇಶ್ವರಂ ಕೆೆ ಬಾಂಬ್ ಸ್ಪೋಟ ಪ್ರಕರಣದಲ್ಲಿ ಎನ್ಐಎ ಸಲ್ಲಿಸಿದ ಚಾರ್ಜ್ ಶೀಟ್ನಲ್ಲಿನ ಅಂಶಗಳೇ ಇದಕ್ಕೆ ಸಾ. ಗೃಹ ಸಚಿವ ಜಿ.ಪರಮೇಶ್ವರ ಇಲಾಖೆ ನಿಭಾಯಿಸುವಲ್ಲಿ ವಿಲವಾಗಿದ್ದಾರೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಪಿ.ರಾಜೀವ್ ಆರೋಪಿಸಿದರು.
ಬಿಜೆಪಿ ರಾಜ್ಯ ಕಚೇರಿ ಮೇಲೆ ದಾಳಿ ನಡೆಸಲು ಉದ್ದೇಶಿಸಲಾಗಿತ್ತು ಎಂದು ತನಿಖೆಯಲ್ಲಿ ಗೊತ್ತಾಗಿದೆ. ಗುಪ್ತಚರ ಇಲಾಖೆಗೆ ಈ ಮಾಹಿತಿ ಇರಲಿಲ್ಲವೆ ? ನಿದ್ರೆ ಮಾಡುತ್ತಿದೆಯಾ ? ಗೃಹ ಸಚಿವರ ವೈಲ್ಯ, ನಿಷ್ಕ್ರಿಯತೆಯಿಂದ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ. ಪೊಲೀಸರನ್ನು ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಪರಾಧ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಮಂಗಳವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ವಾಜಪೇಯಿ ಸದನದಲ್ಲಿ ಇಂದಿರಾಗಾಂಧಿಯನ್ನು ವಿರೋಧಿಸುತ್ತಿದ್ದರು. ವಿದೇಶಿ ನೆಲದಲ್ಲಿ ದೇಶ ಹಾಗೂ ಪ್ರಧಾನಿ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದರು. ಆದರೆ, ರಾಹುಲ್ ಗಾಂಧಿ ವಿದೇಶದಲ್ಲಿ ನಮ್ಮ ದೇಶದ ಬಗ್ಗೆ ಹಿಯಾಳಿಸಿ ಮಾತನಾಡುತ್ತಾರೆ. ತಮ್ಮ ಅಸಮರ್ಥತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಗಾಂಧಿ ಕುಟುಂಬದವರೇ ಸುಮಾರು 40 ವರ್ಷ ದೇಶ ಆಳಿದ್ದಾರೆ. ಅವರೆಲ್ಲರು ವಿಲರಾಗಿದ್ದಾರೆಂಬುದುನ್ನು ರಾಹುಲ್ ಮಾತಿನಲ್ಲಿ ತಿಳಿಯಬಹುದೆಂದು ಕುಟುಕಿದರು.
ವಿದೇಶಿಗಳಿಗೆ ಭಾರತ ಬಹುದೊಡ್ಡ ಮಾರುಕಟ್ಟೆ. ಇಲ್ಲಿ ಉತ್ಪಾದನಾ ಚಟುವಟಿಕೆ ನಡೆಯುವುದನ್ನು ಅವು ಸಹಿಸುವುದಿಲ್ಲ. ಅಸ್ಥಿರಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತವೆ. ಅಂಥವರಿಗೆ ರಾಹುಲ್ ಗಾಂಧಿ ಬೆಂಬಲ ನೀಡುತ್ತಿದ್ದಾರೆ. ಇದನ್ನು ಪ್ರತಿಯೊಬ್ಬ ಭಾರತೀಯ ಖಂಡಿಸುತ್ತಾನೆ. ಮೋದಿ ಇವರೆಲ್ಲ ಪಾಪ ತೊಳೆಯುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಮಹಿಳೆಯರಿಗೆ ಮೀಸಲಾತಿ, 370 ರದ್ದತಿ, ಬಡ ಕುಟುಂಬಗಳಿಗೆ ಶೌಚಗೃಹ ನಿರ್ಮಾಣ ಮಾಡಿದ್ದಾರೆಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ 1.25 ಕೋಟಿ ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಕೊಪ್ಪಳದಲ್ಲಿ 5 ಲಕ್ಷ ಸದಸ್ಯರನ್ನು ಮಾಡಿಸುವ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಮಂಡಲ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಬೂತ್ ಸಮಿತಿ ರಚಿಸಿ ಅಭಿಯಾನ ಆರಂಭಿಸಲಾಗುವುದು. ಯಾರೂ ಬೇಕಾದರೂ ಬಿಜೆಪಿ ಸದಸ್ಯರಾಗಬಹುದು. ನಾವು ಮುಸ್ಲಿಮರ ವಿರುದ್ಧವಲ್ಲ. ಭಯೋತ್ಪಾದಕರ ವಿರುದ್ಧ. ನಾವು ಯಾರನ್ನೂ ತುಷ್ಟೀಕರಣ ಮಾಡುವುದಿಲ್ಲ. ನಾವು ಭಯೋತ್ಪಾದಕರ ವಿರುದ್ಧ ಮಾತನಾಡಿದರೆ ವಿಪಕ್ಷಗಳು ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ ಎಂದು ತಿರುಚುತ್ತಾರೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ರಮೇಶ ನಾಡಿಗೇರ, ಸೋಮಶೇಖರಗೌಡ ಸೋಂಪುರ, ರಾಜು ಬಾಕಳೆ, ಮಹೇಶ ಹಾದಿಮನಿ ಇತರರಿದ್ದರು.