

ನರಗುಂದ: ನರಗುಂದ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ನೂತನ ಮೂರು ಮಂಡಲ ಅಧ್ಯಕ್ಷರುಗಳನ್ನು ಶನಿವಾರ ಆಯ್ಕೆ ಮಾಡಲಾಯಿತು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆಯಲ್ಲಿ ನರಗುಂದ ಮಂಡಲದ ಅಧ್ಯಕ್ಷರನ್ನಾಗಿ ನಾಗನಗೌಡ ತಿಮ್ಮನಗೌಡ್ರ, ಹೊಳೆಆಲೂರ ಮಂಡಲಕ್ಕೆ ಸೋಮಲಿಂಗಪ್ಪ ಚರೇದ, ಲಕ್ಕುಂಡಿ ಮಂಡಲ ಅಧ್ಯಕ್ಷರನ್ನಾಗಿ ಮಹೇಶ ಮುಸ್ಕಿನಬಾವಿ ಅವರನ್ನು ನೇಮಕಗೊಳಿಸಿ ಮೂವರನ್ನು ಬಿಜೆಪಿ ಪಕ್ಷದಿಂದ ಸನ್ಮಾನಿಸಲಾಯಿತು.
ಭಾಜಪ ಗದಗ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಚುನಾವಣಾಧಿಕಾರಿ ಶಶಿಮೌಳಿ ಕುಲಕರ್ಣಿ, ಎಂ.ಎಸ್. ಕರಿಗೌಡರ, ಅಜ್ಜಪ್ಪ ಹುಡೇದ, ಚಂದ್ರು ದಂಡಿನ, ಮಲ್ಲಪ್ಪ ಮೇಟಿ, ಗುರಪ್ಪ ಆದೆಪ್ಪನವರ, ವಸಂತ ಮೇಟಿ, ಅಜ್ಜನಗೌಡ ಪಾಟೀಲ, ಮುತ್ತಣ್ಣ ಜಂಗನ್ನವರ, ನಿಂಗಪ್ಪ ಮನ್ನೂರ, ಅಶೋಕ ಹೆಬ್ಬಾಳ, ಎಸ್.ಬಿ. ಕರಗೌಡ್ರ, ನಿಂಗಣ್ಣ ಗಾಡಿ, ಬಸನಗೌಡ ಪಾಟೀಲ, ಪ್ರಕಾಶ ತಿರಕನಗೌಡ್ರ, ಇತರರು ಉಪಸ್ಥಿತರಿದ್ದರು.