ಬಿಜೆಪಿ ಚುನಾವಣೆ ನಿರ್ವಹಣಾ ಸಮಿತಿ ಸಭೆ

new bjep new
Published on

ಹುಬ್ಬಳ್ಳಿ : ಇಲ್ಲಿನ ಅರವಿಂದ ನಗರದ ಬಿಜೆಪಿ ನೂತನ ಕಾರ್ಯಾಲಯದಲ್ಲಿ ಧಾರವಾಡ ಲೋಕಸಭಾ ಚುನಾವಣೆಯ ನಿರ್ವಹಣಾ ಸಮಿತಿಯ ಸಭೆ ಬುಧವಾರ ನಡೆಯಿತು.

ಧಾರವಾಡ ಲೋಕಸಭೆ ಕ್ಷೇತ್ರದ ಬಿಜೆಪಿ ಸಂಚಾಲಕ ಎಂ. ನಾಗರಾಜ ಅವರು ಚುನಾವಣೆಯ ನಿರ್ವಹಣಾ ಸಮಿತಿಯ 37 ವಿಭಾಗಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಪ್ರತಿಯೊಂದು ವಿಭಾಗದಲ್ಲಿ ಪಕ್ಷದ ಪ್ರಮುಖ ಪದಾಧಿಕಾರಿಗಳನ್ನು ಜೋಡಿಸಲಾಗಿದೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕದಾಡಿ ಮಾತನಾಡಿ, ಕೇಂದ್ರದ ಯೋಜನೆಗಳನ್ನು ಪ್ರತಿ ಮನೆಗೆ ಭೇಟಿ ನೀಡಿ ವಿವರಿಸಬೇಕು ಎಂದು ಹೇಳಿದರು.

ಮಹಾನಗರ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ದತ್ತಮೂರ್ತಿ ಕುಲಕರ್ಣಿ, ವಿಜಯಾನಂದ ಶೆಟ್ಟಿ, ನಾರಾಯಣ ಜರತಾರಘರ, ಮಹೇಂದ್ರ ಕೌತಾಳ, ಮಾಲತೇಶ ಶಾಗೋಟಿ, ಶಿವಾನಂದ ಗುಂಡಗೋವಿ, ಬಸವರಾಜ ಕುಂದಗೋಳಮಠ, ಸಂಜಯ ಕಪಟಕರ, ಜಯತೀರ್ಥ ಕಟ್ಟಿ, ರಂಗಾ ಬದಿ, ಸಿದ್ದು ಮೊಗಲಿಶೆಟ್ಟರ, ರವಿ ನಾಯಕ, ಶಿವು ಮೆಣಸಿನಕಾಯಿ, ಚೈತ್ರಾ ಶಿರೂರ, ರಾಜೇಶ್ವರಿ ಸಾಲಗಟ್ಟಿ, ಮೇನಕಾ ಹುರಳಿ, ಸೀಮಾ ಲದ್ವಾ, ಅನುರಾಧ ಚಿಲ್ಲಾಳ, ಶಾಂತಕ್ಕ ನಿಡವಣಿ, ಬಸಮ್ಮ ಹುಬ್ಬಳ್ಳಿ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net