ಬಿಜೆಪಿ ಬಡವರ ಕುರಿತು ಮಾತನಾಡಲ್ಲ; ಬರೀ ಭಾವನಾತ್ಮಕ ವಿಚಾರ ಪ್ರಸ್ತಾಪ: ಸಚಿವ ಡಾ.ಎಚ್.ಸಿ.ಮಹದೇವಪ್ಪಕಿಡಿ

mysore
Published on

ಮೈಸೂರು: ಬಿಜೆಪಿ ಕೋಮುವಾದ, ಮತೀಯವಾದ, ಧರ್ಮ ಬಿಟ್ಟರೆ ಬಡವರ ಬದುಕಿನ ವಿಚಾರಗಳ ಕುರಿತು ಮಾತನಾಡಲ್ಲ. ಅವುಗಳನ್ನು ಬಗೆಹರಿಸಲೂ ಪ್ರಯತ್ನ ಮಾಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಕಿರಿಕಾರಿದರು.

ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಹೂಟಗಳ್ಳಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ದಲಿತ ಸಮಾಜದ ಮುಖಂಡರ ಸಮಾವೇಶದಲ್ಲಿ ಮಾತನಾಡಿದರು.

ಪಂಡಿತ್ ಜವಾಹರಲಾಲ್ ನೆಹರು ಪಂಚ ವಾರ್ಷಿಕ ಯೋಜನೆ ಮೂಲಕ ಬಡತನ, ಹಸಿವು ನಿವಾರಣೆಗೆ ಮುಂದಾಗಿದ್ದರು. ಆದರೆ ಇಂದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಭಾವನಾತ್ಮಕ ವಿಚಾರಕ್ಕೆ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹೇಳಿದರು.


ಪ್ರಸ್ತಕ ಕಾಲಘಟ್ಟದಲ್ಲಿ ಸಂವಿಧಾನ ಅಪಾಯದಲ್ಲಿ ಇದೆ. ಅನೇಕರು ಬದಲಾವಣೆಯ ಮಾತುಗಳನ್ನಾಡುತ್ತಿದ್ದಾರೆ. ಕರ್ನಾಟಕದಲ್ಲಿ ಸಂವಿಧಾನದ ಪೀಠಿಕೆ ಓದುವುದಕ್ಕೆ ಆದೇಶ ಜಾರಿಗೊಳಿಸಿದ ಮೇಲೆ ಸಾಕಷ್ಟು ಪರಿವರ್ತನೆಯಾಗಿದೆ.

130 ಕೋಟಿ ಜನರನ್ನು ಕಾಪಾಡಲು ಸಂವಿಧಾನವಿದೆ ಹೊರತು ಕೆಲವರಿಗೆ ಅಲ್ಲ. ಸಂವಿಧಾನದ ಜಾಗೃತಿಯಿಂದ ದೇಶದಲ್ಲಿ ಸಂಚಲನ ಉಂಟಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net