ಬಿಜೆಪಿಯಿಂದ ಕಾರ್ಯಕರ್ತರಿಗೆ 10 ಸಾವಿರ ಹೆಲ್ಮೇಟ್ ವಿತರಣೆ

Screenshot_2023-07-19-20-02-24-24.jpg
Published on

ಬೆಳಗಾವಿ: ಪಕ್ಷಕ್ಕಿಂತ ದೇಶ ಮೊದಲು, ವ್ಯಕ್ತಿಗಿಂತ ಪಕ್ಷ ದೊಡ್ಡದು ಎನ್ನವ ಸಿದ್ದಾಂತದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಬಿಜೆಪಿಯ ನಿಷ್ಠಾವಂತ ಯುವ ಕಾರ್ಯಕರ್ತರೇ ಪಕ್ಷಕ್ಕೆ ಬೆನ್ನೆಲುಬಾಗಿದ್ದಾರೆ. ಅವರ ಸುರಕ್ಷಾತಾ ದೃಷ್ಟಿಯಿಂದ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರ ಹೆಲ್ಮೇಟ್ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
 ಖಾನಾಪುರ ಮಂಡಳದ ಸಂಯುಕ್ತ ಮೊರ್ಚಾ ಸಮಾವೇಶದಲ್ಲಿ ಬುಧವಾರ ಹೆಲ್ಮೇಟ್ ವಿತರಿಸಿ ಅವರು ಮಾತನಾಡಿದರು. ಭಾರತವನ್ನು ಜಗದ್ಗುರುವನ್ನಾಗಿಸುವ ನಿಟ್ಟಿನಲ್ಲಿ 9 ವರ್ಷಗಳಿಂದ ಅನೇಕ ಸುಧಾರಣೆಗಳನ್ನು ತರುವುದರ ಜತೆಗೆ ದೇಶದ ಆರ್ಥಿಕ ಸ್ಥಿತಿಯನ್ನು 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ತರಲಾಗಿದೆ. ದೇಶದ ರಕ್ಷಣಾ ವ್ಯವಸ್ಥೆ ಪ್ರಪಂಚದಲ್ಲಿ ಬಲಿಷ್ಠವಾಗಿದ್ದು, 9 ವರ್ಷದಲ್ಲಿ ಒಬ್ಬೇ ಒಬ್ಬ ಉಗ್ರಗಾಮಿಗೆ ದೇಶದೊಳಗೆ ನುಸಳಲು ಸಾಧ್ಯವಾಗಿಲ್ಲ. ಜಲಜೀವನ್ ಅಡಿಯಲ್ಲಿ ದೇಶದ ಜನತೆಯ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸುವುದರೊಂದಿಗೆ ಕೋಟ್ಯಾಂತರ ವಿದ್ಯುತ್ ವಂಚಿತ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ ಕೇಂದ್ರ ಸರ್ಕಾರದ ಸಾಧನೆ  ಮನೆನೆಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
 ಮಹಾ ಸಂಪರ್ಕ ಅಭಿಯಾನಕ್ಕೆ ಚಾಲನೆ:
 9 ವರ್ಷಗಳ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯ ಕರ ಪತ್ರ ಮತ್ತು ಸಮಗ್ರ ಸಾಧನೆ ಒಳಗೊಂಡ ಪುಸ್ತಕದ ಪ್ರತಿಯನ್ನು ಸಾಂಕೇತಿಕವಾಗಿ ಮನೆ ಮನೆಗೆ ತಲುಪಿಸಲಾಯಿತು.
 ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ, ಮಾಜಿ ಶಾಸಕ ಅರವಿಂದ ಪಾಟೀಲ, ಧನಶ್ರೀ ದೇಸಾಯಿ, ಪ್ರಮೋದ ಕೊಚೇರಿ, ಸಂಜಯ ಕುಬಲ, ಮಲ್ಲಿಕಾರ್ಜುನ ಮಾದಮ್ಮನವರ, ಎಫ್.ಎಸ್. ಸಿದ್ದನಗೌಡರ, ಸಂಜಯ ಕಂಚಿ, ಬಾಬುರಾವ್ ದೇಸಾಯಿ, ಗುಂಡು ಪಾಟೀಲ, ಬಸವರಾಜ ಸಾಣಿಕೊಪ್ಪ, ರಾಜೇಂದ್ರ ರಾಯಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net