

ದೇವದುರ್ಗ: ಪ್ರತಿಯೊಬ್ಬರಲ್ಲೂ ರಾಷ್ಟ್ರೀಯತೆ ಬೆಳೆಸುವ ದೃಷ್ಟಿಯಿಂದ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮನೆಮನೆಗೂ ತಿರಂಗಾ ಅಭಿಯಾನ ಆಯೋಜಿಸಲಾಗಿದೆ. ಇದು ಬಿಜೆಪಿಯ ಹೆಗ್ಗುರುತಾಗಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶರಣಬಸವ ಜೋಳದಹೆಡಗಿ ಹೇಳಿದರು.
ತಾಲೂಕಿನ ಜಾಲಹಳ್ಳಿಯಲ್ಲಿ ಆಯೋಜಿಸಿದ್ದ ಹರ್‌ಘರ್ ತಿರಂಗಾ ಅಭಿಯಾನ ಹಾಗೂ ಬೈಕ್‌ರ‌್ಯಾಲಿಗೆ ಚಾಲನೆ ನೀಡಿ ಬುಧವಾರ ಮಾತನಾಡಿದರು.
ಸ್ವಾತಂತ್ರೃ ದಿನಾಚರಣೆಗೂ ಮುನ್ನ ವಾರಕಾಲ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಮನೆ ಮೇಲೆ ತಿರಂಗಾ ಹಾರಿಸುವುದು ಹೆಮ್ಮೆಯ ವಿಷಯವಾಗಿದೆ. ಈ ದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಹರ್‌ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಅಭಿಯಾನ ನಿಮಿತ್ತ ದೇವದುರ್ಗ ಪಟ್ಟಣದಲ್ಲಿ ಸ್ವಚ್ಛತೆ ಕೈಗೊಂಡರೆ, ಜಾಲಹಳ್ಳಿಯಲ್ಲಿ ಬೈಕ್‌ರ‌್ಯಾಲಿ ಮಾಡಲಾಗುತ್ತಿದೆ. ಯುವಜನತೆ ದೇಶಾಭಿಮಾನ ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.