ಮತದಾರರ ವಿಶ್ವಾಸಕ್ಕೆ ಬಿಜೆಪಿ ಅರ್ಹ

BJP deserves the trust of voters
ಹುನಗುಂದ ತಾಲೂಕಿನ ತುರಡಗಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗದ್ದಿಗೌಡರ ಪರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತಯಾಚನೆ ಮಾಡಿದರು. ರಾಜಕುಮಾರ ಬಾದವಾಡಗಿ, ಎಸ್.ಎಸ್. ಪಾಟೀಲ, ಅಜ್ಜಪ್ಪಗೌಡ ನಾಡಗೌಡ ಇತರರಿದ್ದರು.
Published on

ಹುನಗುಂದ: ದೇಶವನ್ನು ಅಭಿವೃದ್ಧಿಯತ್ತ ಸಾಗಿಸಿದ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ ಅವರಿಗೆ ಬಹುಮತ ನೀಡಬೇಕೆಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮನವಿ ಮಾಡಿದರು.

ತಾಲೂಕಿನ ಸಮೀಪದ ತುರಡಗಿಯಲ್ಲಿ ಭಾನುವಾರ ನಡೆಸಿದ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿ ಅಭಿವೃದ್ಧಿ ಸಾಕಷ್ಟು ಅರ್ಹ ಫಲಾನುಭವಿಗಳಿಗೆ ತಲುಪಿವೆ. ಜಲಜೀವನ್ ಯೋಜನೆ, ಹೈವೆ ಮಾರ್ಗ, ಪುನರ್ವಸತಿ ಕೇಂದ್ರ ಸೇರಿ ಕೆಲಸಗಳನ್ನು ಮಾಡಿ ಬಿಜೆಪಿ ಮತದಾರ ಪ್ರಭುಗಳ ವಿಶ್ವಾಸ ಗಳಿಸಿದೆ. ಆದರೆ, ಕಾಂಗ್ರೆಸ್ ಪಕ್ಷ ಬೇರೆ, ಬೇರೆ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಕಬಳಿಸಿ ಗ್ಯಾರಂಟಿಗಳ ಮೂಲಕ ಲೂಟಿ ಕೆಲಸ ಮಾಡಿ, ಎಲ್ಲ ಇಲಾಖೆಗಳಲ್ಲಿ ಶುಲ್ಕ ಹೆಚ್ಚಿಸಿ ಜನರ ಜೀವ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಜಿಪಂ ಸದಸ್ಯ ವೀರೇಶ ಉಂಡೋಡಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಎನ್ನುವ ಕಾಂಗ್ರೆಸ್ ಹೇಳಿಕೆ ನಂಬಬಾರದು. ದೇಶದ ಜನತೆಯ ಹಿತದೃಷ್ಟಿಯಿಂದ ಅನುಕೂಲತೆಗಳನ್ನು ಸೇರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಪಿ.ಸಿ. ಗದ್ದಿಗೌಡರಿಗೆ ಬಹುಮತ ನೀಡಿ ಗೆಲ್ಲಿಸಿ ಮೋದಿ ಕೈ ಬಲಪಡಿಸಬೇಕಿದೆ ಎಂದರು.

ನ್ಯಾಯವಾದಿ ರಾಜಕುಮಾರ ಬಾದವಾಡಗಿ ಮಾತನಾಡಿದರು. ಎಸ್.ಎಸ್. ಪಾಟೀಲ, ಅಜ್ಜಪ್ಪಗೌಡ ನಾಡಗೌಡ, ಮಹಾಂತಗೌಡ ತೊಂಡಿಹಾಳ, ಮಹಾಂತೇಶ ನಾಡಗೌಡ, ಗೂಳಪ್ಪ ಕರಡಿ, ಬಸವರಾಜ ಹುನಕುಂಟಿ, ಮಲ್ಲಪ್ಪ ಸಾಹುಕಾರ ದೊಡಮನಿ, ಪ್ರಕಾಶ ಪಾಟೀಲ, ಶರಣು ನಾರಗಲ್, ರಾಜುಗೌಡ ನಾಡಗೌಡ, ಸಿದ್ದರಾಮಪ್ಪ ದೇಸಾಯಿ, ಹಿರಣ್ಣೆಪ್ಪ ಆಲೂರ, ಸುರೇಶ ತಳವಾರ, ಶಿವು ಗದ್ದಿ, ಶರಣಬಸಪ್ಪ ಇತರರಿದ್ದರು.

ಭಾನುವಾರ ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಟಗೂರ, ವಳಕಲದಿನ್ನಿ, ಬಿಸಲದಿನ್ನಿ, ಚೌಡಕಮಲದಿನ್ನಿ, ಖಜಗಲ್, ಕೆಂಗಲ್‌ಕಡಪಟ್ಟಿ, ಹೂವನೂರ, ವರಗೋಡದಿನ್ನಿ ಮತ್ತು ಬಿಸನಾಳಕೊಪ್ಪ ಗ್ರಾಮಗಳಲ್ಲಿ ಮತಯಾಚನೆ ಸಭೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net