

ಮಂಡ್ಯ: ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಔಷಧ ಒದಗಿಸಬೇಕೆಂಬ ಆಶಯದಿಂದ ಕೇಂದ್ರ ಸರ್ಕಾರ ತೆರೆದಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧ ಕೇಂದ್ರಗಳು ರಾಜ್ಯದಲ್ಲಿ ಮುಚ್ಚುತ್ತಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕಿಸಿದ್ದಾರೆ.
ಈ ಯೋಜನೆಯಡಿ ಶೇ.50ರಿಂದ 90ರಷ್ಟು ರಿಯಾಯಿತಿ ದರದಲ್ಲಿ ಬಡವರಿಗೆ ಔಷಧ ಸಿಗುತ್ತದೆ. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜನೌಷಧ ಕೇಂದ್ರ ತೆರೆಯುವುದನ್ನು ನಿರ್ಬಂಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿರುವುದು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗೆ ಸಾಕ್ಷಿ. ರಾಜ್ಯದಲ್ಲಿ ಜನೌಷಧ ಕೇಂದ್ರ ಆರಂಭಕ್ಕೆ ಸಲ್ಲಿಕೆಯಾದ 31 ಅರ್ಜಿ ತಿರಸ್ಕರಿಸಿರುವುದು ಕೇಂದ್ರದ ಮಹತ್ವಕಾಂಕ್ಷಿ ಯೋಜನೆ ಉದ್ದೇಶ ಕುಗ್ಗಿಸುವ ಹುನ್ನಾರವಾಗಿದೆ. ಕಾಂಗ್ರೆಸ್ ಸರ್ಕಾರವು ಜನರನ್ನು ಸಂಕಷ್ಟಕ್ಕೆ ತಳ್ಳಿ, ಖಾಸಗಿ ಏಜೆನ್ಸಿಗಳ ಬಲವರ್ಧನೆಗೆ ಮುಂದಾಗಿದೆ. ರಾಜ್ಯ ಸರ್ಕಾರದ ಬಳಿ ರೋಗಿಗಳಿಗೆ ಉಚಿತವಾಗಿ ನೀಡಲು ಔಷಧ ಇಲ್ಲ. ಆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾವಚಿತ್ರವಿರುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಜಿದ್ದಿಗೆ ಬಿದ್ದಿರುವ ರಾಜ್ಯಸರ್ಕಾರ ಖಾಸಗಿ ಮೆಡಿಕಲ್ ಮಾಫಿಯಾ ಜತೆಗೆ ಕೈಜೋಡಿಸಿರುವ ಅನುಮಾನವಿದೆ ಎಂದು ದೂರಿದ್ದಾರೆ.
ರಾಜ್ಯಸರ್ಕಾರದ ಈ ನಡೆಯಿಂದ ಅಕ್ಷರ ಸಹ ಬಡ ರೋಗಿಗಳು ಪಡೆದಾಡುವಂತಾಗಿದ್ದ ದುಬಾರಿ ದುಡ್ಡು ಕೊಟ್ಟು ಔಷಧ ಖರೀದಿ ಮಾಡುವ ಅನಿವಾರ್ಯ ಪರಿಸ್ಥಿತಿಗೆ ರೋಗಿಗಳು ಬಸವಳಿದಿದ್ದಾರೆ. ಔಷಧ ಮಳಿಗೆಗಳನ್ನೇನೋ ಮುಚ್ಚಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೊಡುವ. ಅಕ್ಕಿ ಬೇಡ ಎನ್ನುವ ತಾಕತ್ತು ಸರ್ಕಾರಕ್ಕೆ ಇದೆಯೇ ಎಂದು ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.