ದೇಶದ ಪ್ರಗತಿಗೆ ರಾಹುಲ್‌ಗಾಂಧಿ ವಿರೋಧ: ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕೆ

BJP complains to Child Commission against Rahul Gandhi mandya
Published on

ಮಂಡ್ಯ: ಭಾರತದ ಜನರು ಜಗಳಗಂಟರು, ಅಪ್ರಾಮಾಣಿಕರು, ಅವಿದ್ಯಾವಂತರು, ಬುದ್ಧಿಹೀನರೆಂದು ವಿದೇಶದಲ್ಲಿ ಪ್ರಚಾರ ಮಾಡಲು ಕಾಂಗ್ರೆಸ್ ಯುವ ನಾಯಕ ರಾಹುಲ್‌ಗಾಂಧಿ ಹೊರಟಿದ್ದಾರೆ. ದೇಶದ ಪ್ರಗತಿಯನ್ನು ದ್ವೇಷಿಸುವವರು ಮಾತ್ರ ಇಂತಹ ಹೇಳಿಕೆಯನ್ನು ನೀಡಲು ಸಾಧ್ಯ ಎಂದು ಬಿಜಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಟೀಕಿಸಿದ್ದಾರೆ.

ಭಾರತದ ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳು ಸಹಾಯಕ್ಕೆ ಬರಬೇಕೆಂದು ಕರೆ ನೀಡಿದ್ದಾರೆ. 1975ರಲ್ಲಿ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿ ದೇಶ ಭಕ್ತರನ್ನು ಜೈಲಿಗೆ ಕಳುಹಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅವಮಾನವೆಸಗಿದ್ದರು. ಅಜ್ಜಿಯ ಹಾದಿಯಲ್ಲೆ ರಾಹುಲ್‌ಗಾಂಧಿ ಸಾಗುತ್ತಿದ್ದು, ಇದು ವಿಪಕ್ಷ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.

ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ, ಕೆಲವರು ಪ್ರಧಾನಮಂತ್ರಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಾರೆಂದು ರಾಹುಲ್ ಗಾಂಧಿ, ಕೊಲಂಬಿಯಾದ ನೆಲದಲ್ಲಿ ನಿಂತು ಆರೋಪಿಸಿದ್ದಾರೆ. ವಿದೇಶಕ್ಕೆ ಹೋಗಿ ಸ್ವದೇಶವನ್ನು ದೂಷಿಸುವುದು ರಾಹುಲ್ ಗಾಂಧಿಯವರ ಕಾಯಕವಾಗಿದೆ. ರಾಹುಲ್‌ಗಾಂಧಿ ಲೋಕಸಭೆ ವಿರೋಧ ಪಕ್ಷದ ನಾಯಕರು. ಆದ್ದರಿಂದ ಸಂಸತ್ತಿನಲ್ಲಿ ಏನಾದರೂ ಹೇಳಲಿ, ಅಲ್ಲಿ ಅವರ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಿ. ಮತಗಳ್ಳತನದ ಬಗ್ಗೆ ಅವರ ಬಳಿ ಪುರಾವೆ ಇದ್ದರೆ ನ್ಯಾಯಾಲಯದ ಮೊರೆ ಹೋಗಲಿ ಎಂದು ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net