ಕಾರ್ಮಿಕರ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್​ ಒಂದೇ

3
ಕೋಲಾರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ವಿಜಯಕೃಷ್ಣ, ಕೇಶವರಾವ್​, ಭೀಮರಾವ್​, ಕೃಷ್ಣಪ್ಪ ಇದ್ದರು.
Published on

ಸರ್ಕಾರಗಳ ಧೋರಣೆ ಖಂಡಿಸಿ ಮಾ.3ರಿಂದ ಅಹೋರಾತ್ರಿ ಧರಣಿ

ಕೋಲಾರ: ಕಾರ್ಮಿಕ ವರ್ಗವನ್ನು ಕಡೆಗಣಿಸುತ್ತಿರುವ ಸರ್ಕಾರಗಳ ಧೋರಣೆಯನ್ನು ಖಂಡಿಸಿ ಮಾ.3 ರಿಂದ 7ರ ತನಕ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದುಡಿಯುವ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್​&ಬಿಜೆಪಿ ಒಂದೇ ನಾಣ್ಯದ ಎರಡು ಮುಖ, ರಾಜ್ಯದಲ್ಲಿ 5 ಗ್ಯಾರಂಟಿಗಳನ್ನು ನೀಡಿರುವ ಕಾಂಗ್ರೆಸ್​, ಕಾರ್ಮಿರ ಬದುಕಿನ ಗ್ಯಾರಂಟಿ ನೀಡುವಲ್ಲಿ ವಿಲವಾಗಿದೆ ಎಂದು ದೂರಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ನಿಧಿ ನಿರ್ವಹಣೆ, ಕಟ್ಟಡ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಈ ನಿಧಿ ಕಾಯ್ದಿರಿಸುವ ಕ್ರಮಗಳಲ್ಲಿ, ಕೈಗಾರಿಕೆಗಳಲ್ಲಿನ ಲೋಪಗಳನ್ನು ಸರಿಪಡಿಸಬೇಕು, ಕಲ್ಯಾಣ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ತರಬೇಕು ಎಂದು ಒತ್ತಾಯಿಸಲಾಗುವುದು ಎಂದರು.

ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯ ಯೋಜನೆಗಳು ವಿಮೆ ಯೋಜನೆಗಳಿಗೆ ಸೀಮಿತವಾಗುತ್ತಿದೆ, ವಿವಿಧ ರೀತಿಯ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ಅಗತ್ಯವಿರುವ ಬಜೆಟ್​ ಪ್ರೋತ್ಸಾಹ ಹಾಗೂ ಸಂಪನ್ಮೂಲದ ಕ್ರೋಡಿಕರಣದ ಯೋಜನೆಗಳು ಜಾರಿ ಮಾಡಬೇಕು ಎಂದರು. ಗ್ರಾಮ ಪಂಚಾಯಿತಿ ನೌಕರರಿಗೆ ಘೋಷಿತ ಕನಿಷ್ಠ ವೇತನ ಒಳಗೊಂಡು ಅದರ ಸೇವಾ ಸೌಲಭ್ಯಗಳ ಕುರಿತ ಹಲವು ಬೇಡಿಕೆಗಳು ಇತ್ಯರ್ಥ ಮಾಡಬೇಕು. ಬೇಡಿಕೆಗಳನ್ನು ಈಡೇರಿಸಬೇಕು ಹಿಂದಿನಿಂದಲೂ ಸರ್ಕಾರಗಳನ್ನು ಒತ್ತಾಯಿಸಿಕೊಂಡು ಬಂದರೂ ಸಹ ಸ್ಪಂದಿಸಿಲ್ಲ. ಇದರಿಂದಾಗಿ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು. ಮಾ.3ರಂದು ಗ್ರಾಪಂ ಕಾರ್ಮಿಕರಿಂದ, 4ರಂದು ಅಕ್ಷರ ದಾಸೋಹ ಕಾರ್ಮಿಕರಿಂದ, ಮಾ.5 ರಂದು ಕಟ್ಟಡ ನಿಮಾರ್ಣ ಕಾರ್ಮಿಕರಿಂದ, ಮಾ.6 ರಂದು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾಯಂ ಹಾಗೂ ಹೊರ ಗುತ್ತಿಗೆ ಕಾರ್ಮಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಂದ, ಅಂಗನವಾಡಿ ಕಾರ್ಮಿಕರಿಂದ ಹಾಗೂ ಮಾ.7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಟಿ.ವಿಜಯಕೃಷ್ಣ, ಖಜಾಂಚಿ ಕೃಷ್ಣಪ್ಪ, ಕಾರ್ಯದರ್ಶಿಗಳಾದ ಎಂ.ಭೀಮರಾಜ್​, ಕೇಶವರಾವ್​, ಅಕ್ಷರ ದಾಸೋಹ ನೌಕರರ ಸಂಟಯ ಅಧ್ಯಕ್ಷ ಜಯಲಕ್ಷಿ$್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net