ಕರ್ನಾಟದಲ್ಲಿ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ

ಬಿ.ವೈ.ವಿಜಯೇಂದ್ರ ಅವರನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಾಸಕರಾದ ಹರೀಶ್ ಪೂಂಜ, ಭಾಗೀರಥಿ ಮುರುಳ್ಯ ಭೇಟಿಯಾದರು.
ಬಿ.ವೈ.ವಿಜಯೇಂದ್ರ ಅವರನ್ನು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶಾಸಕರಾದ ಹರೀಶ್ ಪೂಂಜ, ಭಾಗೀರಥಿ ಮುರುಳ್ಯ ಭೇಟಿಯಾದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ
  • ಉಪ ಚುನಾವಣೆ ಮಾನದಂಡವಲ್ಲ

ಸುಬ್ರಹ್ಮಣ್ಯ:ಪಂಚ ರಾಜ್ಯಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿಬಿಜೆಪಿ ಗೆಲುವು ದಾಖಲಿಸಿರುವುದುಪಕ್ಷದ ಆತ್ಮವಿಶ್ವಾಸ ಹೆಚ್ಚಿಸಿದೆ.ಮುಂದಿನದಿನಗಳಲ್ಲಿ ಕರ್ನಾಟಕದಲ್ಲೂಬಿಜೆಪಿ ಸ್ವಂತ ಶಕ್ತಿಯಿಂದಅಧಿಕಾರಕ್ಕೆ ಬರುವ ವಿಶ್ವಾಸವಿದೆ.ಜನತೆ ನಮ್ಮನ್ನುಆಶೀರ್ವದಿಸಲಿದ್ದಾರೆ.ವಿವಿಧರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವಗೆಲುವು ಸಂಘಟನೆಯ ಶಕ್ತಿ ಹಾಗೂಪ್ರಧಾನಿ ನರೇಂದ್ರ ಮೋದಿ ಅವರನಾಯಕತ್ವದ ಮೇಲಿನ ಜನರ ವಿಶ್ವಾಸದಪ್ರತಿಫಲ ಎಂದು ಬಿಜೆಪಿ ರಾಜ್ಯಾಧ್ಯಕ್ಷಬಿ.ವೈ.ವಿಜಯೇಂದ್ರಹೇಳಿದರು.

ಕುಕ್ಕೆ ಸುಬ್ರಹ್ಮಣ್ಯದವಸತಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.

ಪಶ್ಚಿಮ ಬಂಗಾಳದಜನತೆಯ ತೀರ್ಪು ಹಿಂದೂ ವಿರೋಧಿನೀತಿಗಳಿಗೆ ಸ್ಪಷ್ಟ ಪ್ರತಿಕ್ರಿಯೆನೀಡಿದಂತಾಗಿದೆ.ಪ್ರಧಾನಿಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವನಂಬಿಕೆಯಿಂದ ಜನರು ನಿರ್ಣಾಯಕತೀರ್ಪು ನೀಡಿದ್ದಾರೆ.ಅಸ್ಸಾಂಮತ್ತು ಪಾಂಡಿಚೇರಿಗಳಲ್ಲಿ ಬಿಜೆಪಿಪುನಃ ಅಧಿಕಾರಕ್ಕೆ ಬಂದಿರುವುದುಆಡಳಿತದ ಜನಪರತೆ ಮತ್ತು ಅಭಿವೃದ್ಧಿಕಾರ್ಯಗಳ ಫಲವಾಗಿದೆ.ಪಶ್ಚಿಮಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿದೊರೆತ ಯಶಸ್ಸು ಕಾರ್ಯಕರ್ತರಪರಿಶ್ರಮ ಮತ್ತು ಜನಬೆಂಬಲದಿಂದಸಾಧ್ಯವಾಗಿದೆ ಎಂದರು.

ಸರ್ಕಾರದೊಂದಿಗೆಕರಜೋಡಿಸಬೇಕು

ಪಶ್ಚಿಮಏಷ್ಯಾ ಯುದ್ಧ ಹಾಗೂ ಜಾಗತಿಕಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿಮಿತವ್ಯಯ ಕ್ರಮ ಕೈಗೊಳ್ಳುವಂತೆಪ್ರಧಾನಿ ಮೋದಿ ನೀಡಿರುವ ಸಲಹೆಯನ್ನುಕಾಂಗ್ರೆಸ್ ಟೀಕಿಸಿರುವುದಕ್ಕೆಪ್ರತಿಕ್ರಿಯಿಸಿದ ವಿಜಯೇಂದ್ರ,ಇಂತಹ ಗಂಭೀರಪರಿಸ್ಥಿತಿಯಲ್ಲಿ ಜವಾಬ್ದಾರಿಯುತವಾಗಿವರ್ತಿಸಬೇಕಾದ ಕಾಂಗ್ರೆಸ್ ಅನಗತ್ಯರಾಜಕೀಯ ಟೀಕೆಗಳಲ್ಲಿ ತೊಡಗಿದೆ.ರಾಷ್ಟ್ರಹಿತದವಿಚಾರಗಳಲ್ಲಿ ಎಲ್ಲರೂ ಸರ್ಕಾರದೊಂದಿಗೆಕೈಜೋಡಿಸಬೇಕು ಎಂದರು.

ಅಭಿಮಾನೋತ್ಸವಐತಿಹಾಸಿಕ ಕ್ಷಣ:ಚಿತ್ರದುರ್ಗದಕೋಟೆನಗರಿಯಲ್ಲಿ ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪಅವರ ರಾಜಕೀಯ ಜೀವನದ 50ನೇವರ್ಷದ ಅಂಗವಾಗಿ ನಡೆದ ಅಭಿಮಾನೋತ್ಸವಕಾರ್ಯಕ್ರಮ ರಾಜ್ಯ ರಾಜಕಾರಣದಲ್ಲಿಐತಿಹಾಸಿಕ ಕ್ಷಣವಾಗಿ ಗುರುತಿಸಿಕೊಂಡಿದೆ.ರಾಜ್ಯದಮೂಲೆ-ಮೂಲೆಗಳಿಂದಲಕ್ಷಾಂತರ ಕಾರ್ಯಕರ್ತರುಸ್ವಯಂಪ್ರೇರಿತವಾಗಿ ಕಾರ್ಯಕ್ರಮಕ್ಕೆಆಗಮಿಸಿದ್ದು,ವಿವಿಧ ಸಮಾಜಗಳಮಠಾಧೀಶರೂ ಭಾಗವಹಿಸಿರುವುದುಕಾರ್ಯಕ್ರಮದ ವೈಶಿಷ್ಟೃವಾಗಿತ್ತುಎಂದರು.

ಕೇಂದ್ರ ಗೃಹ ಸಚಿವಅಮಿತ್ ಶಾ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದು,ಯಡಿಯೂರಪ್ಪಅವರ ಹೋರಾಟದ ಬದುಕಿನ ವಿವಿಧಹಂತಗಳನ್ನು ಸ್ಮರಿಸಿದರು.ಇದೇ ವೇಳೆಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಎರಡು ಪುಟಗಳ ಸಂದೇಶವೂ ವಿಶೇಷಗಮನ ಸೆಳೆದಿದ್ದು,ಯಡಿಯೂರಪ್ಪಮತ್ತು ಮೋದಿ ಅವರ ನಡುವಿನ ಆತ್ಮೀಯಬಾಂಧವ್ಯ ಪ್ರತಿಬಿಂಬಿಸಿತುಎಂದರು.

ರಾಜಕೀಯ ಅಧಿಕಾರಅಥವಾ ಹುದ್ದೆ ಇಲ್ಲದ ಸಂದರ್ಭದಲ್ಲಿಯೂಲಕ್ಷಾಂತರ ಜನರು ಒಂದೇ ವೇದಿಕೆಯಲ್ಲಿಸೇರಿರುವುದು ಯಡಿಯೂರಪ್ಪ ಅವರುಕೇವಲ ನಾಯಕನಲ್ಲ,ಜನಶಕ್ತಿಯಪ್ರತೀಕ ಎಂಬುದನ್ನು ತೋರಿಸಿದೆ.ಕೇವಲ ಹದಿನೈದುದಿನಗಳ ಅವಧಿಯಲ್ಲಿ ಕಾರ್ಯಕ್ರಮಯಶಸ್ವಿಯಾಗಿ ಆಯೋಜಿಸಲು ಕಾರ್ಯಕರ್ತರಸಮರ್ಪಿತ ಪರಿಶ್ರಮವೇ ಪ್ರಮುಖಕಾರಣ ಎಂದು ವಿಜಯೇಂದ್ರ ಹೇಳಿದರು.

ಶಾಸಕರಾದ ಭಾಗೀರಥಿಮುರುಳ್ಯ,ಹರೀಶ್ ಪೂಂಜ,ಸುಬ್ರಹ್ಮಣ್ಯಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾಜೇಶ್ ಎನ್.ಎಸ್.ಪ್ರಮುಖರಾದಪ್ರಸನ್ನ ದರ್ಬೆ ಮತ್ತಿತರರುಉಪಸ್ಥಿತರಿದ್ದರು.

ಉಪ ಚುನಾವಣೆಮಾನದಂಡವಲ್ಲ

ಇತ್ತೀಚಿನ ಉಪಚುನಾವಣೆಫಲಿತಾಂಶಗಳ ಕುರಿತು ಮಾತನಾಡಿದಅವರು, ಹಿಂದೆಆಡಳಿತ ಪಕ್ಷಗಳು ಉಪಚುನಾವಣೆಗಳಲ್ಲಿಗೆಲುವು ಸಾಧಿಸಿದ್ದರೂ ನಂತರದಸಾರ್ವತ್ರಿಕ ಚುನಾವಣೆಯಲ್ಲಿಸರ್ಕಾರವೇ ಪತನವಾದ ಉದಾಹರಣೆಗಳಿವೆ.ಈ ಫಲಿತಾಂಶವನ್ನುಮುಂದಿನ ಚುನಾವಣೆಯ ಮಾನದಂಡವಾಗಿಪರಿಗಣಿಸಲಾಗುವುದಿಲ್ಲ ಎಂದುಬಿ.ವೈ.ವಿಜಯೇಂದ್ರಸ್ಪಷ್ಟಪಡಿಸಿದರು.

ಆಶ್ಲೇಷ ಬಲಿ ಸೇವೆ

ಈ ಮೊದಲು ಮಹತೋಭಾರಕುಕ್ಕೆ ಶ್ರೀ ಸುಬ್ರಹ್ಮಣ್ಯದೇವಸ್ಥಾನಕ್ಕೆ ಭೇಟಿ ನೀಡಿದಅವರು ಆಶ್ಲೇಷ ಬಲಿ ಸೇವೆ ನೆರವೇರಿಸಿದರು.ಬಳಿಕ ಶ್ರೀದೇವರಿಗೆ ಮಹಾಪೂಜೆ ಸೇವೆ ಸಮರ್ಪಿಸಿಮಧ್ಯಾಹ್ನದ ಮಹಾಪೂಜೆ ವೀಕ್ಷಿಸಿದರು.ನಂತರ ದೇವಳದಲ್ಲಿಭೋಜನ ಪ್ರಸಾದ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net